ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ವಾಪಸ್ ಬರುವ ಡೇಟ್ ಫಿಕ್ಸ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಸಾದ ಇಬ್ಬರು ಗಗನಯಾತ್ರಿಗಳಾದ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಬಾಹ್ಯಾಕಾಶ ಸಂಗಾತಿ ವಿಲ್ಮೋರ್ ಬುಚ್ ಅವರು ಯೋಜಿಸಿದ್ದಕ್ಕಿಂತ ಸ್ವಲ್ಪ ಬೇಗ ಭೂಮಿಗೆ ಮರಳಬಹುದು ಎಂದು ನಾಸಾ ತಿಳಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಏಪ್ರಿಲ್ ಬದಲಿಗೆ, ಮಾರ್ಚ್ ಅಂತ್ಯ ಅಥವಾ ಮಾರ್ಚ್ ಮಧ್ಯದಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ತಿಳಿಸಿವೆ.

ಸ್ಪೇಸ್‌ಎಕ್ಸ್ ಮುಂಬರುವ ಗಗನಯಾತ್ರಿ ಹಾರಾಟಗಳಿಗೆ ಕ್ಯಾಪ್ಸುಲ್‌ಗಳನ್ನು ಬದಲಾಯಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳವಾರ ಘೋಷಿಸಿದೆ. ಈ ಬದಲಾವಣೆಯು ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ಗಾಗಿ ಬಾಹ್ಯಾಕಾಶ ನೌಕೆ ನಿಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದೆ.

ಜೂನ್ ಮೊದಲ ವಾರದಲ್ಲಿ ಸುನೀತಾ ಕೇವಲ ಒಂದು ವಾರ ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ ಅವರ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಇದರಿಂದಾಗಿ ಅವರಿಬ್ಬರ ಮರಳುವಿಕೆ ಮುಂದೂಡಲ್ಪಡುತ್ತಲೇ ಇತ್ತು. ನಂತರ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಇಬ್ಬರ ಮರಳುವಿಕೆಯನ್ನು ಘೋಷಿಸಿತು.

ಮಾನವ ಬಾಹ್ಯಾಕಾಶ ಹಾರಾಟವು ಅನಿರೀಕ್ಷಿತ ಸವಾಲುಗಳಿಂದ ತುಂಬಿದೆ” ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಸ್ಪೇಸ್‌ಎಕ್ಸ್ ಕ್ರೂ-9 ಕ್ಯಾಪ್ಸುಲ್‌ನಲ್ಲಿ ಹಿಂತಿರುಗಲಿದ್ದಾರೆ. ಇದು ಸೆಪ್ಟೆಂಬರ್ 29 ರಿಂದ ಬಾಹ್ಯಾಕಾಶ ನಿಲ್ದಾಣದಲ್ಲಿದೆ. ಆದರೆ ಕ್ರೂ-10 ಬಾಹ್ಯಾಕಾಶ ನಿಲ್ದಾಣವನ್ನು ತಲುಪುವವರೆಗೆ ಕ್ರೂ-9 ಅಲ್ಲಿಂದ ಭೂಮಿಗೆ ಹೊರಡಲು ಸಾಧ್ಯವಿಲ್ಲ ಎಂದು ನಾಸಾ ನಿರ್ಧರಿಸಿದೆ.

ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಸಾಧ್ಯವಾದಷ್ಟು ಬೇಗ ಮರಳಿ ಕರೆತರಲು “ತ್ವರಿತವಾಗಿ” ಕೆಲಸ ಮಾಡುತ್ತಿರುವುದಾಗಿ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!