ಹೊಸ ದಿಗಂತ ವರದಿ, ಮಡಿಕೇರಿ:
ಟಿಪ್ಪರ್ ಲಾರಿ ಹಾಗೂ ಮಾರುತಿ 800 ಕಾರು ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಬಾಳೆಲೆ ನಿವಾಸಿ ಅಡ್ಡೇಂಗಡ ಸಜನ್ ಎಂಬವರೇ ಸಾವಿಗೀಡಾದವರಾಗಿದ್ದಾರೆ.
ಬುಧವಾರ ಸಂಜೆ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಸಮೀಪ ಕೈನಾಟಿಯಲ್ಲಿ ಈ ದುರ್ಘಟನೆ ನಡೆದಿದ್ದು, ಸಜನ್ ಚಾಲಿಸುತ್ತಿದ್ದ ಮಾರುತಿ ಕಾರಿಗೆ ಮರಳು ಸಾಗಾಟದ ಟಿಪ್ಪರ್ ಲಾರಿ ಅಪ್ಪಳಿಸಿದೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮರಳು ಲಾರಿಯ ಅತಿ ವೇಗದ ಚಾಲನೆ ಇದಕ್ಕೆ ಕಾರಣ ಎಂದು ಬಾಳೆಲೆ ವ್ಯಾಪ್ತಿಯ ಸಾರ್ವಜನಿಕರು ಆರೋಪಿಸಿದ್ದಾರೆ.