ಉಕ್ರೇನ್‌ ಮೇಲಿನ ಆಕ್ರಮಣ ತಕ್ಷಣ ನಿಲ್ಲಿಸಿ: ರಷ್ಯಾಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಉಕ್ರೇನ್ ಮೇಲಿನ ದಾಳಿಯನ್ನು ಈ ತಕ್ಷಣವೇ ನಿಲ್ಲಿಸುವಂತೆ ರಷ್ಯಾಕ್ಕೆ ಆದೇಶ ನೀಡಿದೆ.
ಉಕ್ರೇನ್‌ ದೇಶವು ತನ್ನ ಮೇಲೆ ರಷ್ಯಾದ ದಾಳಿಯನ್ನು ತಡೆಗಟ್ಟುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು. ವಾದ-ಪ್ರತಿವಾದ ಆಲೈಸಿದ ನ್ಯಾಯಾಲಯ ರಷ್ಯಾ ಪರ ಮತ್ತು ವಿರುದ್ಧ ಮತದಾನಕ್ಕೆ ನಿರ್ಧರಿಸಲಾಯಿತು.
ಈ ವೇಳೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ 13 ನ್ಯಾಯಾಧೀಶರು ರಷ್ಯಾ ವಿರುದ್ಧ ಮತ ಚಲಾಯಿಸಿದರೆ, ಇಬ್ಬರು ರಷ್ಯಾ ಪರವಾಗಿ ಮತ ಹಾಕಿದರು. ರಷ್ಯಾ ವಿರುದ್ಧ ಮತ ಚಲಾಯಿಸಿರುವರಲ್ಲಿ ಭಾರತೀಯ ನ್ಯಾಯಮೂರ್ತಿ ಜಸ್ಟಿಸ್ ದಲ್ವೀರ್ ಭಂಡಾರಿ ಕೂಡ ಸೇರಿರುವುದು ವಿಶೇಷ. ನ್ಯಾಯಾಧೀಶರಾದ ಕಿರಿಲ್ ಗೆವೊರ್ಜಿಯನ್ (ರಷ್ಯಾ) ಮತ್ತು ನ್ಯಾಯಾಧೀಶ ಸ್ಯೂ ಹ್ಯಾಂಕಿನ್ (ಚೀನಾ) ರಷ್ಯಾದ ಪರವಾಗಿ ಮತ ಚಲಾಯಿಸಿದರು. ಐಸಿಜೆ ಆದೇಶವನ್ನು ಅಮೆರಿಕ ಸ್ವಾಗತಿಸಿದೆ. ಈ ತೀರ್ಪಿನ ಮೂಲಕ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್ ಜಯ ಸಾಧಸಿದಂತಾಗಿದೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!