ಸಮುದ್ರದಲ್ಲಿ ಮುಳುಗಿದ ದೋಣಿ: 20ಕ್ಕೂ ಹೆಚ್ಚು ವಲಸಿಗರು ಕಣ್ಮರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತಮ ಜೀವನ ರೂಪಿಸಿಕೊಳ್ಳು ಯುರೋಪ್‌ಗೆ ತೆರಳಿದ್ದ ವಲಸಿಗರ ಬದುಕು ಅರ್ಧಾಂತರವಾಗಿದೆ. ಮೆಡಿಟರೇನಿಯನ್ ಸಮುದ್ರದ ಟುನೀಶಿಯಾ ಕರಾವಳಿಯಲ್ಲಿ ದೋಣಿಯೊಂದು ಮುಳುಗಿ 20 ಕ್ಕೂ ಹೆಚ್ಚು ವಲಸಿಗರು ನಾಪತ್ತೆಯಾಗಿದ್ದಾರೆ. ಆಫ್ರಿಕಾದಿಂದ ಮೆಡಿಟರೇನಿಯನ್ ಸಮುದ್ರದ ಮೂಲಕ ಇಟಲಿಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇತ್ತೀಚೆಗಿನ ದಿನಗಳಲ್ಲಿ ಟ್ಯುನೀಷಿಯಾ ಕರಾವಳಿಯಲ್ಲಿ ಇದೇ ರೀತಿಯ ಹಲವು ಘಟನೆಗಳು ನಡೆದಿವೆ.

ಸುಮಾರು 23 ಆಫ್ರಿಕನ್ ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಶನಿವಾರ ಟುನೀಶಿಯಾದಿಂದ ಇಟಲಿಗೆ ಮೆಡಿಟರೇನಿಯನ್ ದಾಟಲು ಪ್ರಯತ್ನಿಸುತ್ತಿದ್ದಾಗ ಎರಡು ದೋಣಿಗಳು ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರಲ್ಲಿ ಹಲವರು ಸಾವ್ನಪ್ಪಿರುವ ಸಾಧ್ಯತೆಯೂ ಇದೆಯಂತೆ. ಕೋಸ್ಟ್ ಗಾರ್ಡ್ ಇನ್ನೂ 53 ಜನರನ್ನು ರಕ್ಷಿಸಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೀವನೋಪಾಯಕ್ಕಾಗಿ ಆಫ್ರಿಕಾದಿಂದ ಇಟಲಿ ಮತ್ತು ಇತರ ಯುರೋಪಿಯನ್ ದೇಶಗಳಿಗೆ ವಲಸೆ ಹೋಗುವ ಸಮಯದಲ್ಲಿ ಈ ಅಪಘಾತಗಳು ನಡೆಯುತ್ತಿವೆ.

ಟುನೀಶಿಯಾ ತನ್ನ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳದಿದ್ದರೆ, ಉತ್ತರ ಆಫ್ರಿಕಾದಿಂದ ಯುರೋಪಿಯನ್ ರಾಷ್ಟ್ರಗಳಿಗೆ ದೊಡ್ಡ ಪ್ರಮಾಣದ ವಲಸೆಯ ಅಪಾಯವಿದೆ ಎಂದು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ. ಪತನದ ಅಂಚಿನಲ್ಲಿರುವ ಟುನೀಶಿಯಾಕ್ಕೆ ಸಹಾಯ ಮಾಡುವಂತೆ ಐಎಂಎಫ್ ಇತರ ದೇಶಗಳಿಗೆ ಕರೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!