ಮಿಸ್ಸಿಸ್ಸಿಪ್ಪಿ ಸುಂಟರಗಾಳಿ: ಸಾವಿನ ಸಂಖ್ಯೆ 26ಕ್ಕೆ ಏರಿಕೆ, ಹತ್ತಾರು ಮಂದಿ ಕಣ್ಮರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಂಟರಗಾಳಿ ಅಮೆರಿಕದಲ್ಲಿ ತಲ್ಲಣ ಸೃಷ್ಟಿಸಿದ್ದು, ಪರಿಣಾಮವಾಗಿ ಇದುವರೆಗೂ ಒಟ್ಟು 26 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಕಣ್ಮರೆಯಾದವರಿಗಾಗಿ ತೀವ್ರವಾದ ಹುಡುಕಾಟ ಶುರುವಾಗಿದೆ. ಮಿಸ್ಸಿಸ್ಸಿಪ್ಪಿ ಪ್ರದೇಶದಲ್ಲಿ ಸುಂಟರಗಾಳಿಯಿಂದಾಗಿ ಮನೆಗಳು, ಅಂಗಡಿಗಳು ಮತ್ತು ಇತರ ಆಸ್ತಿಯನ್ನು ನಾಶಪಡಿಸಿದೆ. ಸುಂಟರಗಾಳಿ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.

ಗಾಲ್ಫ್ ಬಾಲ್ ಗಾತ್ರದ ಆಲಿಕಲ್ಲು ಬಿದ್ದಿದ್ದು, ಮಿಸ್ಸಿಸ್ಸಿಪ್ಪಿಯ ಜಾಕ್ಸನ್‌ನ ಈಶಾನ್ಯಕ್ಕೆ 96 ಕಿಮೀ ನಷ್ಟವನ್ನುಂಟುಮಾಡಿದೆ. ಸುಂಟರಗಾಳಿ ಪೀಡಿತ ಪ್ರದೇಶದಲ್ಲಿ ರಕ್ಷಣಾ ತಂಡ ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳೀಯ ಜನರು ಎಚ್ಚರದಿಂದ ಇರುವಂತೆ ಸರ್ಕಾರ ಸೂಚಿಸಿದೆ. ಮನೆಗಳು ಕುಸಿದು ಬಿದ್ದ ಬಳಿಕ ಕೆಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿನ ಪರಿಹಾರ ಕಾರ್ಯಗಳು ಕುಂಠಿತವಾಗಿವೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಬಳಿಯ ಮಾಂಟೆಬೆಲ್ಲೊ ನಗರವನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿದೆ. ಸುಂಟರಗಾಳಿ ಎಫೆಕ್ಟ್‌ನಿಂದಾಗಿ ಭಾರೀ ಗಾಳಿ ಆ ಪ್ರದೇಶವನ್ನು ಆವರಿಸಿದೆ.

ರಾಷ್ಟ್ರೀಯ ಹವಾಮಾನ ಸೇವೆಯು ಸುಂಟರಗಾಳಿಯು ಗಂಟೆಗೆ 85 ಮೈಲುಗಳಷ್ಟು ವೇಗ ಹೊಂದಿದೆ ಎಂದು ಅಂದಾಜಿಸಿದೆ. ಮನೆಗಳ ಹೊರಗೆ ನಿಲ್ಲಿಸಿದ್ದ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಭಾರಿ ಸುಂಟರಗಾಳಿಗೆ ಮನೆಯ ಛಾವಣಿಗಳು ಕೊಚ್ಚಿ ಹೋಗಿವೆ. ನಗರದಲ್ಲಿನ ಒಟ್ಟು ಹಾನಿಯನ್ನು ಅಧಿಕಾರಿಗಳು ಅಂದಾಜು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!