Thursday, June 30, 2022

Latest Posts

ಕಾರ್ಖಾನೆಯೊಂದರಲ್ಲಿ ಗುಂಡಿನ ದಾಳಿ, ಮೂವರು ನಾಗರೀಕರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಅಪರಿಚಿತ ದುಷ್ಕರ್ಮಿ ನಡೆಸಿದ ಶೂಟಿಂಗ್‌ನಲ್ಲಿ ಮೂವರು ನಾಗರಿಕರು ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಮೇರಿಲ್ಯಾಂಡ್‌ನ ಸ್ಮಿತ್‌ಬರ್ಗ್‌ನಲ್ಲಿರುವ ಕೊಲಂಬಿಯಾ ಯಂತ್ರ ತಯಾರಿಕಾ ಕಾರ್ಖಾನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿಯ ನಡೆಸಿದ ಎದುರು ದಾಳಿಯಲ್ಲಿ ದಾಳಿಕೋರ ಸೇರಿದಂತೆ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದು, ದಾಳಿಕೋರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಾಯಗೊಂಡ ದಾಳಿಕೋರ, ಹಾಗೂ ಪೇದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕಾದಲ್ಲಿ ಸರಣಿ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಗುಂಡಿನ ದಾಳಿಯ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಾಳಿಕೋರ ಗುಂಡು ಹಾರಿಸಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ಬಂದೂಕು ಹಿಂಸಾಚಾರವನ್ನು ತಡೆಯಲು ಜೋ ಬಿಡೆನ್ ಸರ್ಕಾರ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಂಡಿದ್ದು, ಬಂದೂಕು ಖರೀದಿಗೆ ನಿರ್ಬಂಧ ಹೇರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss