ನಿಲ್ಲದ ರಷ್ಯಾ- ಉಕ್ರೇನ್ ಸಂಘರ್ಷ: ಗೋಧಿಗಾಗಿ ಜಗತ್ತು ತತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾ-ಉಕ್ರೇನ್ ಯುದ್ಧವು ನಿರಂತರವಾಗಿ ಸಾಗುತ್ತಿದೆ. ಯದ್ಧದ ಪರಿಣಾಮವಾಗಿ ಈಗಾಗಲೇ ಜಾಗತಿಕವಾಗಿ ಆಹಾರ ಬಿಕ್ಕಟ್ಟು ತಲೆದೂರಿದ್ದು, ವ್ಯವಸ್ಥೆ ಇನ್ನಷ್ಟು ಹದಗೆಡುವ ಅಪಾಯಗಳು ಗೋಚರಿಸುತ್ತಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳು ಒಟ್ಟಾರೆ ವಿಶ್ವದ ಗೋಧಿಯ ಕಾಲು ಭಾಗಕ್ಕಿಂತ ಹೆಚ್ಚು ರಫ್ತನ್ನು ಪೂರೈಸುತ್ತವೆ. ಕೋವಿಡ್ -19 ಮತ್ತು ಹವಾಮಾನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಪೂರೈಕೆ ಸರಪಳಿಯು ಈಗಾಗಲೇ ಸಾಕಷ್ಟು ದುರ್ಬಲಗೊಂಡಿದೆ, ಈ ನಡುವೆ ತೀವ್ರಗತಿಯಲ್ಲಿ ಸಾಗುತ್ತಿರುವ ಯುದ್ಧದಿಂದಾಗಿ ಪರಿಸ್ಥಿತಿಗಳು ಮತ್ತಷ್ಟು ಬಿಗಡಾಯಿಸುತ್ತಿದೆ.
ಉಕ್ರೇನಿಯನ್ ರೈತರ ಮುಂದಿನ ಗೋದಿ ಕೊಯ್ಲು ಜೂನ್ ಅಂತ್ಯದಲ್ಲಿ ಪ್ರಾರಂಭವಾಗಬೇಕಿತ್ತು. ಯುಕ್ರೇನ್ ಕಳೆದ ಬೇಸಿಗೆಯ ಬೆಳೆಗಳನ್ನು ಯುದ್ಧಕ್ಕೆ ಮೊದಲು ಸಾಗಿಸಿತ್ತು. ಯುದ್ಧದ ಕಾರಣದಿಂದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೆ ಬಹಳಷ್ಟು ಗೋದಿ ಹೊಲಗಳು ಹಾಳುಬಿದಿವೆ. ರೈತರಿಗೆ ಬೆಳೆದ ಬೆಳೆಯನ್ನು ಸಂಗ್ರಹಿಸಿಡಲು ಸ್ಥಳವಕಾಶ, ಬೆಳೆ ಕಟಾವಿಗೆ ಅವಕಾಶ ಲಭ್ಯವಾಗದೆ ಬೆಳೆ ಗದ್ದೆಗಳಲ್ಲಿಯೇ ಕೊಳೆಯುವ ಪರಿಸ್ಥಿತಿಯಿದೆ. ರಷ್ಯಾ ದಾಳಿಯಲ್ಲಿ ಅಳಿದುಳಿದ ಉಗ್ರಾಣಗಳಲ್ಲಿ ಜೋಳ ಮತ್ತು ಬಾರ್ಲಿಯಿಂದ ತುಂಬಿವೆ.
ಅದರೊಂದಿಗೆ ಉಕ್ರೇನ್‌ ನ ಗೋದಿ ಬೆಳೆಯನ್ನು ರಷ್ಯಾ ಬಳಸಿಕೊಳ್ಳುತ್ತಿದೆ. ಆ ದೇಶವು ಉಕ್ರೇನ್‌ನಿಂದ 500,000 ಟನ್‌ಗಳಷ್ಟು ಧಾನ್ಯವನ್ನು ಕದ್ದಿದೆ ಮತ್ತು ಅದನ್ನು ಬರಪೀಡಿತ ಆಫ್ರಿಕನ್ ದೇಶಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ.
ಜಾಗತಿಕವಾಗಿ ಆಹಾರದ ಬೆಲೆಗಳು ಹೆಚ್ಚುತ್ತಲೇ ಇದೆ. ಇದೀಗ ಗೋಧಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಗಳು ಗೋಚರಿಸುತ್ತಿರುವುದರಿಂದ ಸ್ಪೇನ್‌ ಮೊದಲಾದ ದೇಶಗಳು ಹಿಟ್ಟಿನ ಉತ್ಪಾದನೆಯಲ್ಲಿನ ಅಂತರವನ್ನು ತುಂಬಲು ಪರ್ಯಾಯ ಧಾನ್ಯಗಳನ್ನು ಹಿಟ್ಟಿನ ಉತ್ಪಾದನೆಗೆ ಬಳಸಿಕೊಳ್ಳುವಂತಹ ಸ್ಥಿತಿ ಉದ್ಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!