Saturday, December 9, 2023

Latest Posts

ನೈಜೀರಿಯಾದಲ್ಲಿ ತಿಂಡಿ, ಉಡುಗೊರೆಗಾಗಿ ನೂಕಾಟ ತಳ್ಳಾಟ, ಕಾಲ್ತುಳಿತಕ್ಕೆ 31ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೈಜೀರಿಯಾದ ಚರ್ಚ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 31 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿದ್ದಾರೆ. ದಕ್ಷಿಣ ನೈಜೀರಿಯಾದ ಪೋರ್ಟ್ ಹಾರ್ಕೋರ್ಟ್ ಸಿಟಿಯಲ್ಲಿರುವ ಕಿಂಗ್ಸ್ ಅಸೆಂಬ್ಲಿ ಎಂಬ ಚರ್ಚ್‌ನಲ್ಲಿ ಶನಿವಾರ ಬೆಳಿಗ್ಗೆ ಆಹಾರದ ಜೊತೆಗೆ ಉಡುಗೊರೆಗಳನ್ನು ವಿತರಿಸಲಾಯಿತು. ಈ ಬಗ್ಗೆ ಮೊದಲೇ ಪ್ರಚಾರ ನೀಡಿದ್ದರಿಂದ ಊಟ, ತಿಂಡಿ, ಉಡುಗೊರೆ ಪಡೆಯಲು ನಿರೀಕ್ಷೆಗೂ ಮೀರಿದ ಜನ ಚರ್ಚ್‌ ಬಳಿ ಜಮಾಯಿಸಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸರದಿ ಸಾಲಿನಲ್ಲಿ ನಿಲ್ಲುವರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂಕಾಟ, ತಳ್ಳಾಟ ನಡೆದಿದೆ.

ಹಲವರು ಗೇಟುಗಳನ್ನು ಮುರಿದು ಒಳಗೆ ನುಗ್ಗಿದರು. ಈ ವೇಳೆ ಹಠಾತ್ ನೂಕುನುಗ್ಗಲು ಉಂಟಾಯಿತೆಂದು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಸುಮಾರು 31 ಜನರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಘಟನೆ ಮಾಹಿತಿ ಪಡೆದ ಪೊಲೀಸರು ಚರ್ಚ್‌ಗೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಜನರನ್ನು ಚದುರಿಸಿದ ಬಳಿಕ ಶವಗಳನ್ನು ಹೊರತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯಲ್ಲಿದೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!