ಪಂಜಾಬ್‌ ನಲ್ಲಿ ಎಎಪಿ ದರ್ಬಾರ್:‌ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ 40 ಎಕರೆ ಗೋಧಿ ಬೆಳೆ ನಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ ನಲ್ಲಿ ಆಮ್‌ ಆದ್ಮಿ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಜಯಗಳಿಸಿದ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕರಿಸಲು ಬರೋಬ್ಬರಿ 40 ಎಕರೆ ಗೋಧಿ ಬೆಳೆ ನಾಶ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮಾ.16ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಜನ್ಮ ಭೂಮಿ ಖತ್ಕರ್‌ ಕಲಾನ್‌ ನಲ್ಲಿ ಮುಖ್ಯಮಂತ್ರಿ ಭಗವಂತ್‌ ಮಾನ್ ಪ್ರಮಾಣ ವಚನ ಸ್ವೀಕರಿಸಲು ಎಎಪಿ ಬೃಹತ್‌ ಕಾರ್ಯಕ್ರಮವನ್ನು ಸಜ್ಜುಗೊಳಿಸುತ್ತಿದೆ. ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸದೆ ಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ಇಡೀ ಕಾರ್ಯಕ್ರಮಕ್ಕೆ ಬರೋಬ್ಬರಿ 2.61 ಕೋಟಿ ರೂ. ವೆಚ್ಚ ಮಾಡಲಿದೆ.
ಇನ್ನು ಕಾರ್ಯಮಕ್ಕೆ ಬಂದ ಅತಿಥಿಗಳ ವಾಹನಗಳ ಪಾರ್ಕಿಂಗ್‌ ಮಾಡಲೆಂದು ಗ್ರಾಮದ ರೈತರ 40 ಎಕರೆ ಗೋಧಿ ಬೆಳೆಯನ್ನು ನಾಶ ಮಾಡಲಾಗಿದೆ. ಇನ್ನು ಪ್ರತಿ ಎಕರೆಗೆ ಕೇವಲ 46 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ಪುರುಷರು ಹಳದಿ ಬಣ್ಣದ ಟರ್ಬನ್‌ ಮತ್ತು ಸ್ತ್ರೀಯರು ಹಳದಿ ಬಣ್ಣದ ಶಾಲು ಧರಿಸಲು ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!