76ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗ್ಬೇಕಿತ್ತಂತೆ! ಅಡ್ಡಿಯಾದ ಮಗನ ಶೂಟ್‌ ಮಾಡಿ ಕೊಂದ ಅಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ತನ್ನ ಎರಡನೇ ಮದುವೆಗೆ ವಿರೋಧಿಸಿದ್ದಕ್ಕೆ 76 ವರ್ಷದ ವ್ಯಕ್ತಿಯೊಬ್ಬರು 52 ವರ್ಷದ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಆರೋಪಿ ರಂಭಾಯಿ ಅಲಿಯಾಸ್ ರಾಮ್‌ಕುಭಾಯಿ ಬೋರಿಚಾ ಮಾರ್ಚ್ 9ರ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ತನ್ನ ಮಗ ಪ್ರತಾಪ್ ಬೋರಿಚಾ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ತನ್ನ ತಂದೆ ಮರು ಮದುವೆ ಮಾಡಿಕೊಳ್ಳಲು ಪ್ರತಾಪ್ ಆಕ್ಷೇಪಿಸಿದ್ದರಿಂದ ಈ ಭಿನ್ನಾಭಿಪ್ರಾಯ ಉಂಟಾಗಿದೆ. ಕೋಪಗೊಂಡ ರಾಮ್‌ಭಾಯಿ  ಬಂದೂಕನ್ನು ಹೊರತೆಗೆದು ತನ್ನ ಮಗನ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶಬ್ದ ಕೇಳಿ ಪಕ್ಕದ ಮನೆಯವರು ಬಂದು ನೋಡಿದಾಗ ರಾಮ್‌ಭಾಯಿ ತನ್ನ ಮಗನ ಮೃತದೇಹದ ಬಳಿ ಕುಳಿತಿದ್ದರು. ಆತನಿಗೆ ಯಾವುದೇ ಪಶ್ಚಾತ್ತಾಪವೂ ಇರಲಿಲ್ಲ. ಈ ಭಯಾನಕ ಕೃತ್ಯವು ಸ್ಥಳೀಯ ಸಮುದಾಯವನ್ನು ಆಘಾತಕ್ಕೆ ದೂಡಿದೆ. ಈ ಘಟನೆಯ ನಂತರ ಪ್ರತಾಪ್ ಅವರ ಪತ್ನಿ ಜಯಾ ಜಸ್ದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!