ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂ.ಕಲೆಕ್ಷನ್​ ಮಾಡಿದ ‘ವಿಕ್ರಮ್​’: ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್!​

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಹಲವು ವರ್ಷಗಳ ಬಳಿಕ ಸಿನಿಮಾದತ್ತ ಮುಖಮಾಡಿರುವ ನಟ ಕಮಲ್​ ಹಾಸನ್​ ಇದೀಗ ಸಂತಸದಲ್ಲಿದ್ದು,ಜೂನ್​ 3ರಂದು ಬಿಡುಗಡೆಯಾದ ತಮ್ಮ ‘ವಿಕ್ರಮ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಖತ್ ಸದ್ದುಮಾಡುತ್ತಿದೆ.
ಮೊದಲ ದಿನವೇ ತಮಿಳುನಾಡಿನಲ್ಲಿ ‘ವಿಕ್ರಮ್​’ ಚಿತ್ರ 20 ಕೋಟಿ ರೂಪಾಯಿ ಗಳಿಸಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್​ ಹೆಚ್ಚಿತು. ಈ ಚಿತ್ರ 5 ದಿನಕ್ಕೆ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿದೆ.
ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​, ಸೂರ್ಯ ಮುಂತಾದವರು ನಟಿಸಿದ್ದಾರೆ. ಎಲ್ಲರ ಕಾಂಬಿನೇಷನ್​ನಿಂದ ಸಿನಿಮಾ ಸೂಪರ್​ ಹಿಟ್​ ಆಗಿದೆ.
ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲಂಗಾಣ, ಆಂಧ್ರ ಮುಂತಾದ ಕಡೆಗಳಲ್ಲೂ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಸಿನಿಮಾದಲ್ಲಿನ ಸಾಹಸ ದೃಶ್ಯಗಳನ್ನು ಜನರು ಇಷ್ಟಪಟ್ಟಿದ್ದಾರೆ. 67ನೇ ವಯಸ್ಸಿನಲ್ಲೂ ಕಮಲ್​ ಹಾಸನ್​ ಭರ್ಜರಿ ಸಾಹಸ ಮೆರೆದಿರುವುದಕ್ಕೆ ಅಭಿಮಾನಿಗಳು ಭೇಷ್​ ಎಂದಿದ್ದಾರೆ.
ಕಮಲ್​ ಹಾಸನ್​ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ ಆಗಿದ್ದು, ಅವರದೇ ನಿರ್ಮಾಣ ಸಂಸ್ಥೆಯಾದ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಮೂಲಕ ಈ ಚಿತ್ರ ಮೂಡಿಬಂದಿದೆ.
ಬಂಡವಾಳ ಹೂಡಿರುವ ಕಮಲ್​ ಹಾಸನ್​ ಅವರಿಗೆ ಭರ್ಜರಿ ಲಾಭ ಆಗಿದೆ. ಹಾಗಾಗಿ ಸಿನಿಮಾದ ಗೆಲುವಿಗೆ ಕಾರಣರಾದ ನಿರ್ದೇಶಕ ಲೋಕೇಶ್​ ಕನಗರಾಜ್ ಅವರಿಗೆ ದುಬಾರಿ ಬೆಲೆಯ ಕಾರನ್ನು ಅವರು ಉಡುಗೊರೆಯಾಗಿ ನೀಡಿದ್ದಾರೆ. ಅದೇ ರೀತಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅವರಿಗೆ ರೊಲೆಕ್ಸ್​ ವಾಚನ್ನು ಗಿಫ್ಟ್​ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!