ಗಿಲ್ಗಿಟ್-ಬಾಲ್ಟಿಸ್ತಾನ ಭಾರತದಲ್ಲಿದ್ದರೆ ಅಮೆರಿಕಕ್ಕೆ ಅಫಘಾನಿಸ್ತಾನದಲ್ಲಿ ಮುಖಭಂಗವೇ ಆಗುತ್ತಿರಲಿಲ್ಲ- ಅಮೆರಿಕ ರಾಜಕಾರಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ ವೈಫಲ್ಯಕ್ಕೆ ಅಫ್ಘನ್‌ ವಿಚಾರದಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಏರ್ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದೇ ಕಾರಣ ಎಂದು ರೋಡ್ ಐಲ್ಯಾಂಡ್‌ನ ಯುಎಸ್ ಕಾಂಗ್ರೆಸ್ ಅಭ್ಯರ್ಥಿ ಬಾಬ್ ಲ್ಯಾನ್ಸಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆಗೆ ವಿಫಲವಾದ ನಿರ್ಗಮನವಾಗಿದೆ. ಈ ಸಮಯದಲ್ಲಿ ಅಮೆರಿಕವು ಪಾಕ್‌ಗಿಂತ ಭಾರತದೊಂದಿಗೆ ಸಮನ್ವಯ ಸಾಧಿಸಿದ್ದರೆ ಅಮೆರಿಕಾಕ್ಕೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಬ್ಬಂದಿತನದಿಂದ ಕೂಡಿರುವ ಪಾಕಿಸ್ತಾನವನ್ನು ಅವಲಂಬಿಸಿದ್ದೇ ಅಮೆರಿಕಾ ಮುಖಭಂಗಕ್ಕೆ ಕಾರಣವಾಗಿದೆ ಎಂದರು.

ಬಲೂಚಿಸ್ತಾನ್ ಸ್ವತಂತ್ರ ದೇಶವಾಗಿದ್ದಲ್ಲಿ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತದಲ್ಲಿದ್ದರೆ ಅಮೆರಿಕಾ ಡಬಲ್ ಗೇಮ್ ಆಡುವ ಪಾಕಿಸ್ತಾನವನ್ನು ಅವಲಂಬಿಸಬೇಕಾಗುವ ಅವಶ್ಯಕತೆಯೇ ಬರುತ್ತಿರಲಿಲ್ಲ ಎಂದಿದ್ದಾರೆ. ಜಾಗತಿಕ ಭೂಪಟದಲ್ಲಿ ದಕ್ಷಿಣ ಏಷ್ಯಾದ ಹಿತಾಸಕ್ತಿಗಳನ್ನು ಈಡೇರಿಸುವಲ್ಲಿ ಭಾರತದ ಶಕ್ತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಬಾಬ್ ಲ್ಯಾನ್ಸಿಯಾ ತಮ್ಮ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರವಾಗಿದ್ದರೆ, ಪಾಕಿಸ್ತಾನವನ್ನು ಅವಲಂಬಿಸುವ ಬದಲು ನೇರವಾಗಿಯೇ ಅಫ್ಘಾನಿಸ್ತಾನಕ್ಕೆ ಅಮೆರಿಕಾ ಸೇನೆಯನ್ನು ಕಳಿಸಬಹುದಿತ್ತು ಎಂದಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನಕ್ಕೆ ಅಮೆರಿಕಾ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡಲು ಪಾಕಿಸ್ತಾನ ಒಳಗಡೆ ಕತ್ತಿ ಮಸೆಯುತ್ತಿದೆ ಎಂಬುದಕ್ಕೆ ಪಾಕಿಸ್ತಾನದ ಡಬಲ್‌ ಗೇಮ್‌ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!