ಸಂದೀಪ್ ನಾಯಕ್ ಸುಜೀರ್
ಅಟಲ್ ಎಂದರೆ ಹಿಂದಿಯಲ್ಲಿ ಸ್ಥಿರ ಎಂದರ್ಥ. ಜೀವನದುದ್ದಕ್ಕೂ ಮೌಲ್ಯಗಳನ್ನು ಪ್ರತಿಪಾದಿಸಿರುವುದು
ಮಾತ್ರವಲ್ಲದೇ ತಮ್ಮ ಹೆಸರಿಗೆ ಅನ್ವರ್ಥವಾಗಿ ಮೌಲ್ಯಗಳಿಗೆ ಬದ್ಧವಾಗಿ ಬಾಳಿ ಭಾರತಕ್ಕೆ ತಮ್ಮ ಆಡಳಿತಾವಧಿಯಲ್ಲಿ ಹೊಸ ದಿಕ್ಕು ದಿಶೆ ನೀಡಿ ಅಮರರಾದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.
ಚುನಾವಣಾ ಸಭೆಗಳಲ್ಲಿ ” ನಾನು ನಿಮ್ಮಲ್ಲಿ ಕೇವಲ ಮತ ಕೇಳಲು ಬಂದಿದ್ದೇನೆ, ನನಗೆ ಬೇರೇನೂ ಕೊಡುವುದು ಬೇಡ, ಸಿರ್ಫ್ ಏಕ್ ವೊಟ್ ದೇ ದೊ ಸಿರ್ಫ್ ಏಕ್ ವೊಟ್” ಎಂದು ತಮ್ಮ ಶೃೆಲಿಯಲ್ಲಿ ಕೇಳುತ್ತಿರುವುದು ಮತ ಚಲಾವಣೆಗೆ ಉತ್ತೇಜಿಸುವ ನುಡಿಗಳು ಮತ್ತು ಮತ ಚಲಾವಣೆಗೆ ಪ್ರೇರಣೆ ಬಂದು ಬಿಡುತ್ತದೆ. ಅಂತಹ ಸೆಳೆತದ ಚುನಾವಣಾ ಸಮಾವೇಶಗಳು ಇವರದ್ದು.
ತಮ್ಮ ಎರಡನೇ ಅಧಿಕಾರವಧಿಯಲ್ಲಿ ಲೋಕಸಭೆಯ ಅವಿಶ್ವಾಸ ಮತ ಚಲಾವಣೆಯಾದಾಗ ಒಂದು ಮತದಿಂದ ಸರಕಾರ ಬಿದ್ದಾಗ ” ಕೊಳ್ಳಲು ಕುದುರೆಗಳಿದ್ದವು. ಆದರೆ ಖರೀದಿಸುವವರಿಲ್ಲ” ಎಂದಿರುವುದು . ಜನತಾ ಪಕ್ಷದ ಅಧಿಕಾರದಲ್ಲಿ ಜನಸಂಘದ ಸಂಬಂಧ ಕುರಿತಾಗಿ ವಿವಾದ ಬಂದಾಗ ಜನಸಂಘ- ಪರಿವಾರವನ್ನು ತ್ಯಜಿಸದೇ ಮಂತ್ರಿಗಿರಿಯನ್ನೇ ತ್ಯಜಿಸಿರುವುದು ಅಧಿಕಾರಕ್ಕೆ ಅಂಟದೆ ತಕ್ಷಣ ಮುಗುಳ್ನಗುತ್ತಾ ಸಂದರ್ಭಾನುಸಾರ ರಾಜೀನಾಮೆ ನೀಡಿರುವುದು ಇವರ ಮೌಲ್ಯಾಧಾರಿತ ರಾಜಕಾರಣದ ಕೆಲ ಸ್ಯಾಂಪಲ್ ಗಳು.
ನೃೆಜ ಭಾರತ ರತ್ನ ಅಟಲ್ ಜೀ ಹುಟ್ಟಿದ್ದು 25,ಡಿಸೆಂಬರ್ 1924 ರಂದು ಗ್ವಾಲಿಯರ್ ನಲ್ಲಿ. ತಂದೆ ಶಾಲಾ ಶಿಕ್ಷಕ
ಕೃಷ್ಣ ಬಿಹಾರಿ ವಾಜಪೇಯಿ. ತಾಯಿ ಕೃಷ್ಣಾ ದೇವಿ. ಗ್ವಾಲಿಯರ್ ನಲ್ಲಿ ಪದವಿ, ಕಾನ್ಪುರದಲ್ಲಿ ಎಂ ಎ ಮುಗಿಸಿ ಕಾನೂನು ಶಿಕ್ಷಣ ಕೃೆಗೊಂಡರು. ಆದರೆ ಕಾರಣಾಂತರಗಳಿಂದ ಅರ್ಧಕ್ಕೆ ಮೊಟಕುಗೊಳಿಸಿದ ಕಾನೂನು ಉನ್ನತ ಪದವಿಯನ್ನು ಸ್ವಲ್ಪ ಸಮಯ ಬಳಿಕ ಆರ್ ಎಸ್ ಎಸ್ ಲ್ಲಿ ದುಡಿಯುತ್ತಾ ಪೂರ್ತಿಗೊಳಿಸಿದರು.
ಪತ್ರಕರ್ತರಾಗಬೇಕೆಂದು ಬಯಸಿದ್ದ ಇವರ ರಾಜಕಾರಣ ಪ್ರವೇಶ ಆಕಸ್ಮಿಕ ಎನ್ನುತ್ತಾರೆ. ಆದರೆ ಕಾಲೇಜು ದಿನಗಳಲ್ಲಿ ಪ್ರತಿಫಲಿಸುತ್ತಿದ್ದ ನಾಯಕತ್ವದ ಗುಣ ಲಕ್ಷಣಗಳು ಭಾವೀ ಮಹಾನ್ ನಾಯಕತ್ವಕ್ಕೆ ದಿಕ್ಸೂಚಿಯಾಗಿದ್ದವು.
1953 ರಲ್ಲಿ ಮೊದಲ ಬಾರಿಗೆ ಲಕ್ನೋ ಲೋಕಸಭಾ ಚುನಾವಣೆ ಸ್ಪರ್ಧಿಸಿ ಸೋತರು. 1957 ರಲ್ಲಿ ಮತ್ತೊಮ್ಮೆ
ಇಲ್ಲಿ ಸ್ಪರ್ಧಿಸಿದರೂ ಗೆಲುವು ದಕ್ಕಲಿಲ್ಲ. ಇದೇ ವರ್ಷ ಬಲರಾಂಪುರದಿಂದ ಜಯಶೀಲರಾಗಿ ಲೋಕಸಭೆ ಪ್ರವೇಶಿಸಿದರು. ನಂತರವೂ ಸೋಲು- ಗೆಲುವನ್ನು ಸಮಾನವಾಗಿ ಕಂಡವರು.
” ನ ದೃೆನ್ಯಂ ನ ಪಲಾಯನಂ” ಎಂದು ಸೋತಾಗ ಕಾರ್ಯಕರ್ತರನ್ನು ಹುರಿದುಂಬಿಸಿದ್ದರ ಪರಿಣಾಮವೇ ಭಾಜಪಹಲವುರಾಜ್ಯಕೇಂದ್ರಗಳಲ್ಲಿ ಅಧಿಕಾರಕ್ಕೇರುವುದರೊಂದಿಗೆ ಜಾಗತಿಕವಾಗಿ ಪ್ರವರ್ಧಮಾನ ಬಂದಿರುವುದಕ್ಕೆ ಮೂಲ ಕಾರಣಗಳಲ್ಲೊಂದು.
ಇವರೋರ್ವ ರಾಜಕೀಯ ಸಂತ. ಸುಮಾರು 40 ಕಾಲ ಪ್ರತಿ ಪಕ್ಷದಲ್ಲಿದ್ದು ತಮ್ಮ ಅಮೂಲ್ಯ ಸಲಹೆ ಮಾರ್ಗದರ್ಶನ ಗಳಿಂದ ಆಡಳಿತ ಪಕ್ಷಕ್ಕೆ ಸಹಕಾರ ನೀಡುವುದರೊಂದಿಗೆ ಆಡಳಿತದ ತಪ್ಪನ್ನು ಹುಡುಕಿ ಚಾಟಿ ಬೀಸುವುದರಲ್ಲಿ ನಿಸ್ಸೀಮ – ಮುತ್ಸದ್ಧಿ ಯಾಗಿದ್ದು ವಿಪಕ್ಷ ನಾಯಕ ಹೇಗಿರಬೇಕು ಼ಎಂದು ಮಾದರಿಯಾದವರು.
ಬಾಲ್ಯದಿಂದಲೇ ವಾಗ್ಮಿ ಯಾಗಿದ್ದ ಇವರ ಭಾಷಣವಾಗಲೀ, ಸಂದರ್ಶನ- ಮಾತಾಡಲು ಆಲಿಸುವುದೇ ಖುಷಿ. ಸತ್ಯ, ಅನುಭವ, ಹಾಸ್ಯ,ನಿಷ್ಠುರತೆ,ಎಚ್ಚರಿಕೆ,.. ಗಳ ರಸಪಾಕ . ಆದ ಕಾರಣ ದಿಂದಲೇ ಇವರ ವಿರೋಧಿಗಳೂ ಇವರ ಮಾತು- ಭಾಷಣ ಆಲಿಸುತ್ತಿದ್ದರು.
ನಾಯಕನ ಧೈರ್ಯ ಹೇಗಿರಬೇಕು ಎಂಬುದಕ್ಕೆ ಇವರ ಆಡಳಿತಾವಧಿಯಲ್ಲಿನ ಕಾರ್ಗಿಲ್ ಯುದ್ಧ ಮತ್ತು ಪರಮಾಣು ಸ್ಪೋಟಗಳೇ ದೃಷ್ಟಾಂತಗಳು.
ಅರ್ಜುನ ತನಗೇ ಆದರ್ಶ ಎನ್ನುತ್ತಾ ಅಟಲ್ ಜೀ ತಮ್ಮದೇ ಕವಿತೆ ” ಹಾರ್ ನಹೀ ಮಾನೂಂಗಾ ರಾರ್ ನಹೀ… ಗೀತ್ ನಯಾ ಗೀತಾ ಹೂಂ” ಎಂದು ರಾಜಕೀಯದ ಆರಂಭದ ದಿನಗಳಿಂದಲೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಧೃತಿಗೆಡದೆ ಮೇಲಿನ ಅವರ ಗೀತೆ ಯಂತೆ ಮುನ್ನುಗ್ಗಿ ದವರು. “ಅಂದೇರಾ ಛಟೇಗ ಸೂರಜ್ ನಿಕ್ಲೇಗ
ಔರ್ ಕಮಲ್ ಖಿಲೇಗ ” ಎಂದು ಭವಿಷ್ಯವಾಣಿ ಸಾರುತ್ತಾ ಕಮಲವನ್ನು ಅರಳಿಸಿ ಅಧಿಕಾರಕ್ಕೇರಿಸಿದ ರಾಜಕೀಯ
ಜ್ಯೋತಿಷ್ಯ.
ತಮ್ಮ ಅಧಿಕಾರವಧಿಯ ಗ್ರಾಮಗಳಿಗೆ ರಸ್ತೆ ನಿರ್ಮಿಸುವ ಪ್ರಧಾನಮಂತ್ರಿ ಗ್ರಾಮ ಸಡಕ್ . ರಾ. ಹೆ ಮೇಲ್ದರ್ಜೆ, ಬಂಡವಾಳ ವಾಪಸಾತಿ, ನಾನಾ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ, ಗುಣಮಟ್ಟದ ಶಾಲಾ ಶಿಕ್ಷಣ
ಲಭಿಸಲು ಸರ್ವ ಶಿಕ್ಷಣ ಅಭಿಯಾನ, ಅಂದಿನ ಜಿಡಿಪಿಯಲ್ಲಿ ವೃದ್ಧಿ(ಶೇ 7 ದಾಟಿರುವುದು) ಜಾಗತಿಕ ರಾಷ್ಟ್ರಗಳೊಂದಿಗೆ ಸ್ನೇಹ ಬಂಧ, ಹೀಗೆಲ್ಲ. (ನಂತರ ನರೇಂದ್ರ ಮೋದಿ ಆಡಳಿತ ಇವರ ನೀತಿ-ಯೋಜನೆಗಳನ್ನು ಮುಂದುವರೆಸಿದೆ) ನವಭಾರತ ನಿರ್ಮಾಣದ ಯೋಚನೆಗಳಿಂದ ಯೋಜನೆ ಸೃಜಿಸಿ ನವ ಭಾರತದ ಕಲ್ಪನೆಗೆ ಬುನಾದಿ ಹಾಕಿದವರು.
ಜೃೆಜವಾನ್, ಜೃೆ ಕಿಸಾನ್ ಘೋಷಕ್ಕೆ ಜೃೆ ವಿಜ್ಞಾನ್ ಜೋಡಿ ಸಿದ್ದು ಮಾತ್ರವಲ್ಲದೇ ಭಾರತವನ್ನು ವಿಜ್ಞಾನ-ತಂತ್ರಜ್ಞಾನ ದಲ್ಲಿ ಹೊಸ ಭಾಷ್ಯ ವನ್ನು ಜಗತ್ತಲ್ಲೇ ಬರೆಯುವಂತೆ ಮಾಡಿರುವುದು ಇತಿಹಾಸ. ರೋಟಿ , ಕಪ್ಡಾ ಔರ್ ಮಕಾನ್ ನೊಂದಿಗೆ ಮೊಬೈಲ ಪೋನ್ ನ್ನು ಪ್ರತಿಯೊಬ್ಬರೂ /ಪ್ರತಿ ಕುಟುಂಬವು ಹೊಂದಬೇಕೆಂದು
ಮಹತ್ವಕಾಂಕ್ಷಿಯಾಗಿದ್ದು ಮೊಬೃಲ್ ಕ್ರಾಂತಿಗೆ ಮುನ್ನುಡಿ ಬರೆದ ಮಹಾ ಮಾನವತಾವಾದಿ ಯಾಗಿದ್ದರು.
ತುರ್ತು ಪರಿಸ್ಥಿತಿ ಯು ವಿಷಮ ದಿನಗಳಲ್ಲಿ ಸೆರೆಮನೆಯಲ್ಲಿ ಕನ್ನಡ ಕಲಿತಿದ್ದು ಅಲ್ಪ-ಸ್ವಲ್ಪ ಕನ್ನಡ ಬಲ್ಲವರಾಗಿದ್ದು ಸಮಯೋಚಿತವಾಗಿ ಕನ್ನಡ ಮಾತಾಡುತ್ತಿದ್ದದ್ದು ಉಂಟು.
“ಎ ರೈಟ್ ಪರ್ಸ್ ನ್ ಇನ್ ಇನ್ ರೊಂಗ್ ಪಾರ್ಟಿ ” ಎನ್ನುತ್ತಿದ್ದ ವಿರೋಧಿಗಳಿಗೆ ,ನಾನು ಒಳ್ಳೆಯವನಾಗಿದ್ದರೆ ನನ್ನ ಪಕ್ಷ ಕೂಡ ಒಳ್ಳೆಯದೇ .ನನ್ನ ಮತ್ತು ಪಕ್ಷದ ನಡುವೆ ಭೇದ ಕಲ್ಪಿಸುವ ನಿಮ್ಮ ಹುನ್ನಾರ ವ್ಯರ್ಥ ಎಂದು ತಿರುಗೇಟಿತ್ತವರು ಅಟಲ್ ಜಿ. ಇದು ಇವರ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿ.
ಹೀಗೆ ವಿಶ್ವಕ್ಕೆ ಆದರ್ಶಪ್ರಾಯವಾದ ಜನನಾಯಕ ಭಾರತದ ಪ್ರಗತಿಯನ್ನು ತಮ್ಮ ಶಿಷ್ಯನ ಆಡಳಿತವನ್ನು ದೂರದಿಂದಲೇ ನೋಡಿ ಹರಸುತ್ತಿರುವ ಅಟಲ್ ಜೀ ಆಗಸ್ಟ್ 16, 1918 ರಂದು ಇಹಲೋಕ ತ್ಯಜಿಸಿದರು. ಅಟಲ್ ಜೀ ಯವರು ಮತ್ತೆ ಹುಟ್ಟಿ ಬರಲಿ.
ಸಂದೀಪ್ ನಾಯಕ್ ಸುಜೀರ್
ಮಂಗಳೂರು