ಕೇಜ್ರಿವಾಲ್‌ಗಿಂತ ಅತಿಶಿ ಸಾವಿರ ಪಟ್ಟು ಉತ್ತಮ: ದೆಹಲಿ ಸಿಎಂ ಅನ್ನು ಹೊಗಳಿದ ಲೆಫ್ಟಿನೆಂಟ್ ಗವರ್ನರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಮೊದಲ ಬಾರಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಹೊಗಳಿದ್ದು, ಹಿಂದಿನ ಸಿಎಂ ಅರವಿಂದ್ ಕೇಜ್ರಿವಾಲ್‌ಗಿಂತ ಸಾವಿರ ಪಟ್ಟು ಉತ್ತಮ ಎಂದು ಶುಕ್ರವಾರ ಹೇಳಿದ್ದಾರೆ.

ಇಂದಿರಾಗಾಂಧಿ ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಕ್ಸೇನಾ, ‘ದಿಲ್ಲಿಯ ಸಿಎಂ ಮಹಿಳೆಯಾಗಿರುವುದು ನನಗೆ ಸಂತಸ ತಂದಿದೆ ಮತ್ತು ಅವರು ತಮ್ಮ ಹಿಂದಿನ ಸಿಎಂಗಿಂತ ಸಾವಿರ ಪಟ್ಟು ಉತ್ತಮರು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ ಎಂದರು.

ವಿದ್ಯಾರ್ಥಿಗಳಿಗೆ, ‘ನಿಮ್ಮ ಮುಂದೆ ನಾಲ್ಕು ಮಾರ್ಗದರ್ಶಿ ನಕ್ಷತ್ರಗಳಿವೆ. ಮೊದಲನೆಯದು ನಿಮಗೆ ನಿಮ್ಮ ಬಗ್ಗೆ ಜವಾಬ್ದಾರಿ, ಎರಡನೆಯದು ನಿಮ್ಮ ಪೋಷಕರು ಮತ್ತು ಕುಟುಂಬದ ಬಗೆಗಿನ ಜವಾಬ್ದಾರಿ ಮತ್ತು ಮೂರನೆಯ ಜವಾಬ್ದಾರಿ ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ’ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!