ನಾಳೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಫಲಿತಾಂಶ: ಯಾರಿಗೆ ಸಿಗಲಿದೆ ಗೆಲುವಿನ ಖುಷಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಫಲಿತಾಂಶ ಶನಿವಾರ ಹೊರ ಬೀಳಲಿದೆ. ಇದರ ಜೊತೆಗೆ ನಾಳೆ ಪಂಜಾಬ್, ಕೇರಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.

81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಚುನಾವಣೆ ನಡೆದರೆ, 288 ಅಸೆಂಬ್ಲಿ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ನವೆಂಬರ್ 23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಿತು. ಈಗ, ಎಲ್ಲಾ ಅಭ್ಯರ್ಥಿಗಳ ಭವಿಷ್ಯವು ನವೆಂಬರ್ 23 ಕ್ಕೆ ಹೊರ ಬೀಳಲಿದೆ. ಚುನಾವಣಾ ಕಣದಲ್ಲಿರುವ ರಾಜಕೀಯ ನಾಯಕರ ಭವಿಷ್ಯ ಮತ ಎಣಿಕೆಯೊಂದಿಗೆ ನಿರ್ಧಾರವಾಗಲಿದೆ.

15 ರಾಜ್ಯಗಳಲ್ಲಿ ಹರಡಿರುವ 48 ವಿಧಾನಸಭಾ ಕ್ಷೇತ್ರಗಳು ಮತ್ತು 2 ಸಂಸದೀಯ ಕ್ಷೇತ್ರಗಳಿಗೆ ಉಪಚುನಾವಣೆಯೂ ಏಕಕಾಲದಲ್ಲಿ ನಡೆಯಿತು. ಪಂಜಾಬ್‌ನಲ್ಲಿ 4, ಉತ್ತರ ಪ್ರದೇಶದಲ್ಲಿ 9 ಅಸೆಂಬ್ಲಿ ಸ್ಥಾನಗಳು, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಮಹಾರಾಷ್ಟ್ರದ ಒಂದು ಸಂಸದೀಯ ಸ್ಥಾನ (ನಾಂದೇಡ್) ಉಪಚುನಾವಣೆ ನಡೆದಿದೆ.

ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳ ಮತ ಎಣಿಕೆಯು ನವೆಂಬರ್ 23 ರ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ಬಳಿಕ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಇವಿಎಂಗಳನ್ನು ತೆರೆಯಲಾಗುವುದು. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://results.eci.gov.in ಸಂಪೂರ್ಣ ಮಾಹಿತಿಯನ್ನು ಪ್ರಕಟಿಸುತ್ತದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಬಗ್ಗೆ ಹೆಚ್ಚಿದ ಕುತೂಹಲ
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ತೀವ್ರ ಪೈಪೋಟಿ ನೀಡಿವೆ. ಬಿಜೆಪಿಯು ಮಹಾರಾಷ್ಟ್ರದಲ್ಲಿ ತನ್ನ ಅಭಿವೃದ್ಧಿ ಯೋಜನೆಗಳನ್ನು ಬಿಂಬಿಸಲು ಪ್ರಯತ್ನಿಸಿದರೆ, ಹಿಂದು ಮತಗಳನ್ನು ಒಗ್ಗೂಡಿಸುವ ಗುರಿಯೊಂದಿಗೆ “ಏಕ್ ಹೈ ತೋ ಸೇಫ್ ಹೈ” ಘೋಷಣೆಯೊಂದಿಗೆ ಪ್ರಚಾರ ನಡೆಸಿವೆ. ರಾಜ್ಯದಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಭ್ರಷ್ಟಾಚಾರ ವಿಚಾರದಲ್ಲಿ ಮಹಾಯುತಿ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿತು.

ಜಾರ್ಖಂಡ್‌ನಲ್ಲಿನ ಪ್ರತಿಪಕ್ಷ ಬಿಜೆಪಿಯು ತನ್ನ ‘ಬತೇಂಗೆ ತೋ ಕಟೇಂಗೆ’ ಘೋಷಣೆಯನ್ನು ಪುನರುಚ್ಚರಿಸಿತು, ಅದೇ ಸಮಯದಲ್ಲಿ ರಾಜ್ಯವನ್ನು ಒಳನುಸುಳುವಿಕೆ ಸಮಸ್ಯೆಗಳಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಿತು, ಆದರೆ ಆಡಳಿತಾರೂಢ ಹೇಮಂತ್ ಸೊರೆನ್ ಸರ್ಕಾರವು ಬಿಜೆಪಿಗೆ ದಾಳಿ ಮಾಡಿ ಅಧಿಕಾರವನ್ನು ಉಳಿಸಿಕೊಳ್ಳುವ ಭರವಸೆಯಲ್ಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!