September 19, 2026
Saturday, September 19, 2026
spot_img

ಮಗಳನ್ನು ‘ಮಿಯು’ ಎಂದು ಕರೆದ ಅಟ್ಲೀ: ಹೆಸರಿನ ಅರ್ಥ ಕೇಳಿ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಪತ್ನಿ ಪ್ರಿಯಾ ಅಟ್ಲೀ ತಮ್ಮ ಮಗಳ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ ತಮ್ಮ ಮಗಳಿಗೆ ‘ಮಿಯು’ ಎಂದು ಹೆಸರು ಇಟ್ಟಿರುವುದಾಗಿ ತಿಳಿಸಿದ್ದು, ಈ ಹೆಸರಿನ ಅರ್ಥವೂ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ನಮ್ಮ ಹೃದಯಕ್ಕೆ ಹೊಸ ಹೆಸರು ಸಿಕ್ಕಿದೆ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ದಂಪತಿ, “ನಮ್ಮ ಹೃದಯಕ್ಕೆ ಹೊಸ ಹೆಸರು ಸಿಕ್ಕಿದೆ, ಅದೇ ಮಿಯು” ಎಂದು ಬರೆದುಕೊಂಡಿದ್ದಾರೆ. ‘ಮಿಯು’ ಎಂದರೆ ಸೌಂದರ್ಯ, ಮೃದುತ್ವ ಮತ್ತು ಪ್ರೀತಿ ಎಂಬ ಅರ್ಥ ಹೊಂದಿದೆ ಎಂದು ಅಟ್ಲೀ ವಿವರಿಸಿದ್ದಾರೆ. ಈ ಹೆಸರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಇದನ್ನೂ ಓದಿ:

ಏಪ್ರಿಲ್ 20ರಂದು ಅಟ್ಲೀ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ತಮ್ಮ ಮಗ ಮೀರ್ ಅಣ್ಣನಾಗಿರುವ ಖುಷಿಯನ್ನು ಕಾರ್ಟೂನ್ ಶೈಲಿಯ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ಪ್ರಿಯಾ ಅವರ ಎರಡನೇ ಗರ್ಭಧಾರಣೆ ಬಗ್ಗೆ ದಂಪತಿ ಮಾಹಿತಿ ನೀಡಿದ್ದರು.

ಸಿನಿಮಾ ಕೆಲಸಗಳಲ್ಲಿ ಬ್ಯುಸಿ

2014ರಲ್ಲಿ ವಿವಾಹವಾದ ಅಟ್ಲೀ ಮತ್ತು ಪ್ರಿಯಾ, 2023ರಲ್ಲಿ ಮೊದಲ ಮಗುವಾದ ಮೀರ್‌ಗೆ ಜನ್ಮ ನೀಡಿದ್ದರು. ಸಿನಿಮಾ ವಿಚಾರಕ್ಕೆ ಬಂದರೆ, ಅಟ್ಲೀ ‘ರಾಜಾ ರಾಣಿ’, ‘ಬಿಗಿಲ್’, ‘ಜವಾನ್’ ಸಿನಿಮಾಗಳ ಮೂಲಕ ಭಾರೀ ಹೆಸರು ಮಾಡಿದ್ದು, ಇದೀಗ ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !