ದರೋಡೆಕೋರನ ಮನೆಯ ಮೇಲೆ ದಾಳಿ: ಪೋಲೀಸರ ಮೇಲೆ ಮಗಳ ಸಾವಿನ ಅರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಪ್ರದೇಶದಲ್ಲಿ ದರೋಡೆಕೋರನೊಬ್ಬನ ಮನೆಯ ಮೇಲೆ ಪೋಲೀಸರು ದಾಳಿ ನಡೆಸಿದ ಬೆನ್ನಲ್ಲೇ ಆತನ ಮಗಳು ಶವವಾಗಿಪತ್ತೆಯಾಗಿದ್ದು ಮಗಳ ಸಾವಿಗೆ ಪೋಲೀಸರೇ ಕಾರಣ ಎಂದು ಆರೋಪಿಸಲಾಗಿದೆ.

ಚಂದೋಲೀ ಜಿಲ್ಲೆಯ ಕನ್ಹಯ್ಯಾ ಯಾದವ್‌ ಅವರ ಮನೆಯ ಮೇಲೆ ಪೋಲೀಸರು ದಾಳಿ ನಡೆಸಿದಿದ್ದರು. ಪೋಲೀಸರ ದಾಳಿಯ ನಂತರ ಆತನ ಮಗಳು ನಿಶಾ ಶವವಾಗಿ ಪತ್ತೆಯಾಗಿದ್ದರು. ಮನೆಯಲ್ಲಿ ಆರೋಪಿ ಕನ್ಹಯ್ಯಾ ಯಾದವ್‌ ಇಲ್ಲ ಎಂಬ ಕಾರಣಕ್ಕೆ ಪೋಲೀಸರು ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಜಿಲ್ಲಾ ದಂಡಾಧಿಕಾರಿ ಸಂಜೀವ ಸಿಂಗ್‌ “ದರೋಡೆಕೋರ ಕನ್ಹಯ್ಯಾ ಯಾದವ್ ಅವರ ಪುತ್ರಿ ನಿಶಾ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತಳನ್ನು ಸೈಯ್ಯದ್ರಾಜ ಪೊಲೀಸ್ ಠಾಣೆಯ ಎಸ್‌ಎಚ್‌ಒ ಥಳಿಸಿದ್ದಾರೆ, ನಂತರ ಅವಳು ಸಾವನ್ನಪ್ಪಿದ್ದಾಳೆ” ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ಸ್ಥಳೀಯರು ಪೋಲೀಸರ ವಿರುದ್ಧ ಪ್ರತಿಭಟನೆ ಮಾಡಿದ್ದು ಇವರೊಂದಿಗೆ ಅಲ್ಲಿನ ಸಮಾಜವಾದಿಕ್ಷವೂ ಸೇರಿಕೊಂಡಿದೆ. ಎಸ್ಎಚ್‌ಒ ಅವರನ್ನು ಅಮಾನತ್ತುಗೊಳಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!