ಕಾಶ್ಮೀರ ನರಮೇಧವನ್ನೇ ನಿರಾಕರಿಸುವ ವಿಕಿಪೀಡಿಯಾ ಬರಹ, ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿ.ಕಾಶ್ಮೀರಿ ಫೈಲ್ಸ್‌ ಚಿತ್ರದ ಮೇಲಿನ ನಿರಂತರ ನೆಗೆಟಿವ್‌ ಕಮೆಂಟ್‌ಗಳ ವಿರುದ್ಧ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಕೆಂಡಾಮಂಡಲರಾಗಿದ್ದಾರೆ. ಮೇ 1ರಂದು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಸಿನಿಮಾ ಬಗ್ಗೆ ಋಣಾತ್ಮಕ ವಿಮರ್ಶೆ ಮಾಡಿದ್ದ ವಿಕಿಪೀಡಿಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಆತ್ಮೀಯ ವಿಕಿಪೀಡಿಯಾ, ʻನೀವು ಬರೆದಿರುವ ಸಿನಿಮಾ ವಿಮರ್ಶೆಯಲ್ಲಿ ಇಸ್ಲಾಮೋಫೋಬಿಯಾ… ಪ್ರಚಾರ… ಸಂಘಿ… ಧರ್ಮಾಂಧ… ಇತ್ಯಾದಿ ವಿಚಾರಗಳನ್ನು ಸೇರಿಸಲು ಮರೆತಿದ್ದೀರಿ. ಈ ಪದಗಳನ್ನು ಬಳಸಿ ಇನ್ನಷ್ಟು ಸೆಕ್ಯುಲರ್‌ ಆಗಿʼ ಎಂದು ತಿರುಗೇಟು ನೀಡಿದ್ದಾರೆ.

‘ ಚಿತ್ರದ ಬಗ್ಗೆ ವಿಕಿಪೀಡಿಯಾ ತನ್ನ ಸಂಪಾದಕ ವಿಭಾಗದಲ್ಲಿ ಚಲನಚಿತ್ರ ನಿಖರವಾದ ಮಾಹಿತಿಯನ್ನು ಬಿತ್ತರಿಸುವಲ್ಲಿ ವಿಫಲವಾಗಿದೆ ಹಾಗೂ ಚಿತ್ರದಲ್ಲಿ ಉಲ್ಲೇಖಿಸಲಾದ ಘಟನೆಗಳು ಹೆಚ್ಚಾಗಿ ಪಿತೂರಿ ಸಿದ್ಧಾಂತಗಳಿಗೆ ಸಂಬಂಧಿಸಿವೆ ಎಂದು ಆರೋಪ ಮಾಡಿದೆ. ಈ ಚಿತ್ರವು ವಿವಾದಿತ ಕಾಶ್ಮೀರದ ಪ್ರದೇಶದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯ ಸುತ್ತ ಕೇಂದ್ರೀಕೃತವಾದ ಕಾಲ್ಪನಿಕ ಕಥಾಹಂದರವನ್ನು ಪ್ರಸ್ತುತಪಡಿಸುತ್ತದೆ. ಇದು 1990 ರ ದಶಕದ ವಲಸಿಗರ ನರಮೇಧವನ್ನ ಚಿತ್ರಿಸುತ್ತದೆ, ಇದು ವ್ಯಾಪಕವಾಗಿ ತಪ್ಪಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಪಿತೂರಿ ಸಿದ್ಧಾಂತಗಳೊಂದಿಗೆ ಸಂಬಂಧಿಸಿದ ಸಿನಿಮಾ ಆಗಿದೆ ಎಂದು ವಿಕಿಪೀಡಿಯಾ ಬರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!