ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ನನ್ನು ನೋಡಲು 2ನೇ ಬಾರಿ ಬಳ್ಳಾರಿ ಜೈಲಿಗೆ ಇಂದು (ಸೆ.5) ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ಇನ್ನೊಬ್ಬ ಸಂಬಂಧಿ ಸೇರಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾಗಿದ್ದಾರೆ. 25 ನಿಮಿಷ ದರ್ಶನ್ ಜೊತೆ ಪತ್ನಿ ಹಾಗೂ ಸಹೋದರ ಮಾತನಾಡಿದ್ದು ಈ ವೇಳೆ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನ ಸಂಜೆ 4:30ಕ್ಕೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ಸಂಬಂಧಿ ಭೇಟಿ ಮಾಡಿದರು. ಜೈಲಿನ ಒಳಗಿದ್ದ ದರ್ಶನ್ ಸಂಜೆ 4.30 ರಿಂದ 5.30 ವರೆಗೆ ದರ್ಶನ್ ಭೇಟಿಗೆ ಅಧಿಕಾರಿಗಳು ಅವಕಾಶ ನೀಡಿದ್ದರು. ಹೀಗಾಗಿ ಸರಿಯಾಗಿ 4:30ಕ್ಕೆ ಜೈಲಿಗೆ ಪತ್ನಿ, ಸಹೋದರ ಕಾರಿನಲ್ಲಿ ಆಗಮಿಸಿದ್ದರು.
ಸಂದರ್ಶಕರ ಕೊಠಡಿಯಲ್ಲಿ 25 ನಿಮಿಷ ದರ್ಶನ್ ಜೊತೆ ಮಾತನಾಡಿರುವ ಕುಟುಂಬಸ್ಥರು ಜಾರ್ಜ್‌ಶೀಟ್‌ಗೆ ಮಾಹಿತಿ ನೀಡಿದ್ದಾರೆ.
ಮಾತುಕತೆ ಮುಗಿದ ಬಳಿಕ ಸಹೋದರ ತಂದಿದ್ದ ಬಟ್ಟೆಗಳ ಬ್ಯಾಗ್ ಜೊತೆ ಬೇಕರಿ ಫುಡ್ ಬೆಡ್, ಬಿಸ್ಕತ್ ಇರುವ ಇನ್ನೊಂದು ಬ್ಯಾಗ್ ಅನ್ನು ದರ್ಶನ್ ಅವರು ತೆಗೆದುಕೊಂಡು ಜೈಲಿನ ಒಳಗೆ ಹೋಗಿದ್ದಾರೆ. ಇನ್ನು ದರ್ಶನ್ ಅವರು ಬರುವಾಗ ಹಾಗೂ ಹೋಗುವಾಗ ಜೈಲಾಧಿಕಾರಿಗಳು ಭದ್ರತೆಯನ್ನು ಒದಗಿಸಿದ್ದರು.