October 15, 2026
Thursday, October 15, 2026
spot_img

ಭಾರತದ ತೈಲ ಟ್ಯಾಂಕರ್‌ ಮೇಲೆ ದಾಳಿ: ಇರಾನ್‌ ರಾಯಭಾರಿಗೆ ಭಾರತ ಸಮನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾರ್ಮುಜ್‌ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಭಾರತದ ಎರಡು ಟ್ಯಾಂಕರ್‌ ಮೇಲೆ ಗುಂಡಿನ ದಾಳಿ ನಡೆದಿದ್ದು, ಭಾರತ ದೇಶದಲ್ಲಿರುವ ಇರಾನ್‌ ರಾಯಭಾರಿಗೆ ಸಮನ್ಸ್‌ ನೀಡಲಾಗಿದೆ.

ಕ್ವೆಶ್ಮ್‌ ಹಾಗೂ ಲಾರಕ್‌ ದ್ವೀಪಗಳ ನಡುವೆ ಸಮುದ್ರದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯಾದ ಮೇಲೆ ನಮ್ಮ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಾಸ್‌ ಬಂದಿವೆ ಎಂದು ವರದಿಯಾಗಿದೆ.

ವಿಶ್ವದ ಎಲ್ಲ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಸುಮಾರು ಒಂಬತ್ತು ಭಾರತೀಯ ಹಡಗುಗಳ ಜಲಸಂಧಿ ಮೂಲಕ ಹಾದುಹೋಗಿವೆ. ಇಂದು ಜಲಸಂಧಿ ದಾಟುತ್ತಿದ್ದ ಹಡಗುಗಳ ಮೇಲೆ ಯಾವುದೇ ಸೂಚನೆ ನೀಡದೇ ಗುಂಡಿನ ದಾಳಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಸಮನ್ಸ್‌ ನೀಡಿದೆ. ಜೊತೆಗೆ ರಾಯಭಾರ ಕಚೇರಿಯಲ್ಲಿ ಔಪಚಾರಿಕ ಪ್ರತಿಭಟನೆ ದಾಖಲಿಸಿದೆ.

Must Read