ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ವಿದೇಶಿ ಮಹಿಳೆಯರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ದಯಾನಂದ ವಿಹಾರ್‌ ಪ್ರದೇಶದಲ್ಲಿ ಸ್ಪಾ ಮತ್ತು ಮಸಾಜ್ ಸೆಂಟರ್ ಸೋಗಿನಲ್ಲಿ ನಡೆಸಲಾಗುತ್ತಿದ್ದ ಸೆಕ್ಸ್ ರಾಕೆಟ್ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದು, ವಿದೇಶಿ ಮಹಿಳೆಯರು ಸೇರಿದಂತೆ ಕೆಲವರನ್ನು ಬಂಧಿಸಲಾಗಿದೆ .
ಇಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಜುಲೈ 21 ರಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಸುಳಿವಿನ ಮೇರೆಗೆ ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿತ್ತು.
ತನಿಖೆಯ ಭಾಗವಾಗಿ, ಪೊಲೀಸರು ತಮ್ಮದೇ ವ್ಯಕ್ತಿಯೊಬ್ಬನನ್ನು ಗ್ರಾಹಕನ ಸೋಗಿನಲ್ಲಿ ಸ್ಪಾಗೆ ಕಳುಹಿಸಿದ್ದರು. ಸ್ಪಾ ನಲ್ಲಿದ್ದ ಅಯಾನ್ ಎಂಬ ವ್ಯಕ್ತಿ ಮಸಾಜ್ ಮಾಡಲು 1000 ರೂಪಾಯಿ ಚಾರ್ಜ್ ಅಗುತ್ತೆ ಎಂದು ಹೇಳಿ, ಯುವತಿಯೊಂದಿಗೆ ಆತನನ್ನು ಕ್ಯಾಬಿನ್​ಗೆ ಕಳುಹಿಸಿದ್ದ. ಇನ್ನೂ ಸಾವಿರ ರೂಪಾಯಿ ನೀಡಿದರೆ ತನ್ನೊಂದಿಗೆ ಸೆಕ್ಸ್​ ಮಾಡಬಹುದು ಎಂದು ಯುವತಿ ಆಫರ್ ನೀಡಿದ್ದಳು. ಈ ಸಂದರ್ಭದಲ್ಲಿ ಗ್ರಾಹಕ ಪೊಲೀಸರಿಗೆ ಮಿಸ್ಡ್ ಕಾಲ್ ಮೂಲಕ ಮಾಹಿತಿ ನೀಡಿದ್ದನು.
ಈ ಹಿನ್ನೆಲೆ ಸ್ಥಳದ ಮೇಲೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆಯಲಾಯಿತು. ಸ್ಪಾ ಪರವಾನಗಿ ಅವಧಿ ಮುಗಿದಿರುವುದು ಕೂಡ ತನಿಖೆಯ ಸಮಯದಲ್ಲಿ ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!