ಮೈಸೂರಿನಲ್ಲಿ ರೇವ್ ಪಾರ್ಟಿ ಮೇಲೆ ದಾಳಿ: PSI ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮೈಸೂರಿನ ಹೊರವಲಯದ ಕೆಆರ್​ಎಸ್​ ಬ್ಯಾಕ್​ ವಾಟರ್​ನಲ್ಲಿ ನೂರಕ್ಕೂ ಅಧಿಕ ಯುವತಿ-ಯುವತಿಯರಿಂದ ರೇವ್ ಪಾರ್ಟಿ ಮಾಡಲಾಗಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಸದ್ಯ ಪಾರ್ಟಿ ವೇಳೆ ದಾಳಿ ಮಾಡಿದ್ದ ಪಿಎಸ್​ಐ ಅವರನ್ನು ಅಮಾನತು ಮಾಡಲಾಗಿದೆ.

ಇಲವಾಲ ಠಾಣೆ ವ್ಯಾಪ್ತಿಯಲ್ಲಿ ಸೆ. 28ರಂದು ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ಮಾಡಿದ್ದ ಮೈಸೂರು ತಾಲೂಕಿನ ಇಲವಾಲ ಠಾಣೆ PSI ಮಂಜುನಾಥ ನಾಯಕ್​ರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.

ಅದ್ಧೂರಿ ಪಾರ್ಟಿಯಲ್ಲಿ ಯುವಕರು, ಯುವತಿಯರು ಭಾಗಿಯಾಗಿದ್ದರು. ದಾಳಿ ವೇಳೆ ಪಿಎಸ್​​ಐ ಮೇಲೆ ಹಲ್ಲೆ ನಡೆಸಿ ಯುವಕರು ಪರಾರಿಯಾಗಿದ್ದರು. ನಂತರ ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದಿಢೀರ್ ಆಗಿ ಅಮಾನತು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮಂಜುನಾಥ ನಾಯಕ್ ಆಸ್ಪತ್ರೆಗೆ ದಾಖಲಾದ ನಂತರ ಎಎಸ್​ಪಿ ನಾಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಯುವಕರು, ಯುವತಿಯರನ್ನು ವಶಕ್ಕೆ ಪಡೆದು 64 ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. ಪಾರ್ಟಿ ಆಯೋಜಿಸಿದ್ದ ಐವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ಉಳಿದವರಿಗೆ ನೋಟಿಸ್ ನೀಡಲಾಗಿತ್ತು.

ಸದ್ಯ ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಮಾದಕ ದ್ರವ್ಯ ಸಿಕ್ಕಿಲ್ಲ. ವಿವಿಧ ಮಾದರಿಯ ಬಿಯರ್ ಬಾಟಲ್​ಗಳು, ಮದ್ಯ, ಸಿಗರೇಟ್ ಪತ್ತೆಯಾಗಿವೆ. ಕೆಲವರು ಕಾರುಗಳನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಶಕ್ಕೆ ಪಡೆದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ಗಾಂಜಾ ಸೇವನೆ ಬಗ್ಗೆ ಸ್ಪಷ್ಟತೆ ಸಿಗಲಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!