ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದೆ.ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಕಿತ್ತಾಟ ಶುರುವಾಗಿದೆ.
ಬಿಗ್ ಬಾಸ್ ಸೀಸನ್ 11ರ ಸ್ವರ್ಗ, ನರಕದ ಯುದ್ಧ ಶುರುವಾಗಿದೆ. ಇಂದಿನ ಟಾಸ್ಕ್‌ನಲ್ಲಿ ನರಕದ ನಿವಾಸಿಗಳಿಗೆ ಸ್ವರ್ಗದಲ್ಲಿರುವ ಸ್ಪರ್ಧಿಗಳು ಶಿಕ್ಷೆಗೆ ಗುರಿಪಡಿಸಿದ್ದಾರೆ. ಸ್ವರ್ಗದವರು ತೆಗೆದುಕೊಂಡ ತೀರ್ಮಾನದಂತೆ ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳ ಮೇಲೆ ಏರಲಾಗಿದೆ.
ನರಕದಲ್ಲಿರುವ ಏಳು ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಕೆಲಸ ಮಾಡಲು ಆರಂಭಿಸಿದ್ದಾರೆ. ಅಂದ್ರೆ ಮನೆಯನ್ನ ತೊಳೆಯೋದು, ಗುಡಿಸೋ ಕೆಲಸ ಮಾಡುತ್ತಾ ಇದ್ದಾರೆ. ಈ ಮಧ್ಯೆ ಸ್ವರ್ಗ, ನರಕದ ಅಸಲಿ ಕಿಚ್ಚು ಹೊತ್ತಿಕೊಂಡಿದೆ.
https://x.com/ColorsKannada/status/1840724424342798747
ಸ್ವರ್ಗದಲ್ಲಿರುವ ಉಗ್ರಂ ಮಂಜು ಅವರು ನರಕ ನಿವಾಸಿ ಚೈತ್ರಾ ಕುಂದಾಪುರ ಅವರಿಗೆ ಕೆಲಸ ಒಂದನ್ನ ಹೇಳಿದ್ದಾರೆ. ಹಣ್ಣನ್ನು ವಾಷ್ ಮಾಡಿ ಕಟ್ ಮಾಡಿಕೊಡಲು ಚೈತ್ರಾ ಅವರಿಗೆ ಉಗ್ರಂ ಮಂಜು ಹೇಳಿದ್ದಾರೆ. ಆದರೆ ಚೈತ್ರಾ ಅವರು ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಬಿಸಾಕಿದ್ದಾರೆ. ಆಗ ಸ್ವರ್ಗದ ನಿವಾಸಿಗಳು ಕೂಗಾಡಿದ್ದು, ರೂಲ್ಸ್ ಬ್ರೇಕ್ ಆಗಿದೆ ಎನ್ನುತ್ತಾರೆ.
‘ನೀವು ಮಾತನಾಡುವಂತಿಲ್ಲ’ ಎಂದು ಚೈತ್ರಾಗೆ ಉಗ್ರಂ ಮಂಜು ತಾಕೀತು ಮಾಡಿದ್ದಾರೆ. ‘ಮಾತನಾಡಬಾರದು ಅಂತ ರೂಲ್ ಬುಕ್ನಲ್ಲಿ ಇದ್ದರೆ ತೋರಿಸಿ, ನಾನು ಮಾತನಾಡಲ್ಲ’ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ. ಸೀಸನ್ 11ರ ಮೊದಲನೆ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಚೈತ್ರಾ ಕುಂದಾಪುರ ಅವರು ಉಗ್ರಂ ಮಂಜು ಮಧ್ಯೆ ಬೆಂಕಿ ಹೊತ್ತಿಕೊಂಡಿದ್ದು, ಜಗಳ ತಾರಕಕ್ಕೇರಿದೆ.