Saturday, April 1, 2023

Latest Posts

ಗಾಯಕ ಸೋನು ನಿಗಮ್ ಮೇಲೆ ಹಲ್ಲೆ: ಕ್ಷಮೆ ಕೇಳಿದ ಸುಪ್ರದಾ ಫತೇರ್ ಪೇಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ನಿನ್ನೆ ಹಲ್ಲೆ ನಡೆದಿದ್ದು, ಈ ಘಟನೆ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದ್ದು, ಶಾಸಕ ಪ್ರಕಾಶ್ ಫತೇರ್ ಪೇಕರ್ ಸಹೋದರಿ ಸುಪ್ರದಾ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ.

ಸೋನು ನಿಗಮ್ (Sonu Nigam) ಮೇಲಿನ ಹಲ್ಲೆಯನ್ನು ನಾನೂ ಒಪ್ಪಲಾರೆ. ಯಾರ ಮೇಲೂ ಯಾರೂ ಕೈ ಮಾಡಬಾರದು. ಇಂಥದ್ದೊಂದು ಘಟನೆ ನಡೆಯಬಾರದಿತ್ತು. ನಡೆದಿರುವುದಕ್ಕೆ ವಿಷಾದವಿದೆ. ನನ್ನ ಕುಟುಂಬದ ಸದಸ್ಯನಿಂದ ಆದ ಹಲ್ಲೆಗೆ ಕ್ಷಮೆ ಕೇಳುವುದಾಗಿ ಶಾಸಕ ಪ್ರಕಾಶ್ ಫತೇರ್ ಪೇಕರ್ ಸಹೋದರಿ ಸುಪ್ರದಾ ತಿಳಿಸಿದ್ದಾರೆ.

ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ಸೋನು ಬರೆದ ದೂರಿನಲ್ಲಿ (Complaint) ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ ಎಂದು ಬರೆದಿದ್ದಾರೆ. ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!