ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಭಯೋತ್ಪಾದನಾ ದಾಳಿ (Mumbai Terror Attack)ಯ ದುಷ್ಕರ್ಮಿಗಳು, ಇನ್ನೂ ಕೂಡ ಪಾಕಿಸ್ತಾನದಲ್ಲಿ (Pakistan) ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ (Javed Akhtar) ಹೇಳಿದ್ದಾರೆ.
ಲಾಹೋರ್‌ನಲ್ಲಿ ನಡೆದ ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಖ್ತರ್, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 2008ರ ನವೆಂಬರ್ 26ರಂದು ನಡೆದ ಭೀಕರ ಮುಂಬೈ ದಾಳಿಯ ಕುರಿತು ಮಾತನಾಡಿದರು.
`ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೀರಿ, ಆದ್ರೆ ನೀವು ಹಿಂತಿರುಗುವಾಗ, ಇವರು ಒಳ್ಳೆಯ ಜನ ಅನ್ನಿಸುತ್ತಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಅದರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅಂದು ಮುಂಬೈ ಮೇಲೆ ದಾಳಿ ಹೇಗೆ ನಡೆಯಿತು ಎಂಬುದನ್ನು ನಾವು ನೋಡಿದ್ದೇವೆ. ಆದ್ರೆ ಅವರು ನಿಮ್ಮ ದೇಶದಲ್ಲಿ (ಪಾಕಿಸ್ತಾನ) ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಹೇಳಿದರು.