ಪ್ರಧಾನಿ ಮೋದಿ ಪರ ಹಾಡು ಬರೆದಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ: ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದಕ್ಕೆ ಯುವಕನ ಮೇಲೆ ಮುಸ್ಲಿಂ (Muslim) ಯುವಕರು ಹಲ್ಲೆ ಮಾಡಿದ ಘಟನೆ ನಡೆದಿದೆ.

ಮೈಸೂರಿನ(Mysuru) ಸರ್ಕಾರಿ ಅತಿಥಿ ಗೃಹದ ಬಳಿ ರೋಹಿತ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ರೋಹಿತ್ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಅಲ್ಲದೇ ಪಾಕಿಸ್ತಾನ ಹಾಗೇ ಅಲ್ಲಾಹ ಪರ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ.

ಅಲ್ಲದೇ ನರೇಂದ್ರ ಮೋದಿ ಹಾಡು ಮಾಡಿದ್ದೀಯಾ ನಿನ್ನ ಸಾಯಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ರೋಹಿತ್ ಆರೋಪಿಸಿದ್ದಾರೆ.

ರೋಹಿತನ ಬಟ್ಟೆ ಹರಿದು ದೈಹಿಕವಾಗಿ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ಹಲ್ಲೆಗೊಳಗಾದ ಯುವಕ ನೇರವಾಗಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬಂದು ಘಟನೆ ಸಂಬಂಧ ದೂರು ನೀಡಿದ್ದು, ಬಳಿಕ ಪೊಲೀಸರೇ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ರೋಹಿತ್‌ ಹೇಳಿದ್ದೇನು?
ನಾನು ಕಳೆದ ವಾರ ಮೋದಿ ಕುರಿತಾಗಿ ಸಾಂಗ್‌ ಮಾಡಿದ್ದೆ. ನಾನು ಜನರ ಜೊತೆ ಈ ಸಾಗ್‌ ತೋರಿಸಿ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ನಾನು ಸರ್ಕಾರಿ ಗೆಸ್ಟ್‌ ಹೌಸ್‌ನಲ್ಲಿ ಕುಳಿತುಕೊಂಡಿದಾಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ. ಈ ವೇಳೆ ಅವರು ಮೋದಿ ಬಗ್ಗೆ ಹಾಡು ಮಾಡ್ತೀಯಾ ಎಂದು ಪ್ರಶ್ನಿಸಿ ಪಾಕಿಸ್ತಾನದ ಪರ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಒತ್ತಾಯ ಮಾಡಿದರು. ಅಷ್ಟೇ ಅಲ್ಲದೇ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನನಗೆ ಅವರು ಮುಸ್ಲಿಮ್‌ ಹುಡುಗರು ಅಂತ ಗೊತ್ತಿರಲಿಲ್ಲ ಎಂದು ರೋಹಿತ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!