ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಜಪಾನಿನ ಐವರು ಪಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನದ ಕರಾಚಿಯಲ್ಲಿ ಜಪಾನ್​ ಪ್ರಜೆಗಳಿದ್ದ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಜಪಾನ್ ನಾಗರಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಹಮ್ಲಾಲಂಡಿಯ ಮುರ್ತಾಜಾ ಚೋರಂಗಿ ಬಳಿ ದಾಳಿ ನಡೆದಿದೆ ಎಂದು ಮಾಜಿ ಡಿಐಜಿ ಅಜ್ಫರ್ ಮಹಸರ್ ತಿಳಿಸಿದ್ದಾರೆ.

ಜಪಾನಿ ಪ್ರಜೆಗಳಿದ್ದ ವ್ಯಾನ್​ಗೆ ಉಗ್ರಗಾಮಿ ಮೋಟರ್​ಬೈಕ್​ ಮೂಲಕ ಗುದ್ದಿದ್ದಾನೆ. ಲಂಧಿಯ ಮುರ್ಜಾಜ್​ ಛೋರ್ಂಗಿಯ ಸಮೀಪದ ಪಾಕಿಸ್ತಾನ್​ ಸುಜುಕಿ ಮೋಟರ್ಸ್​​ನಲ್ಲಿ ಈ ಜಪಾನಿ ಪ್ರಜೆಗಳು ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಯಲ್ಲಿ ಐದು ಜಪಾನಿಗರು ಸುರಕ್ಷಿತವಾಗಿದ್ದು, ಅವರ ರಕ್ಷಣೆ ನಡೆಸುತ್ತಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್​​​ ಗಾಯಗೊಂಡಿದ್ದಾರೆ. ಭಯೋತ್ಪಾದಕ ವಾಹನದ ಮುಂಭಾಗದಿಂದ ಗನ್​ ತೆಗೆದು ದಾಳಿ ನಡೆಸಲು ಮುಂದಾದ ವೇಳೆ ಪೊಲೀಸ್ ಭದ್ರತಾ ಸಿಬ್ಬಂದಿ ಫೈರಿಂಗ್​ ನಡೆಸಿ ಕೊಂದಿದ್ದಾರೆ.

ಸಿಟಿಡಿ ಡಿಐಜಿ ಆಸಿಫ್​​ ಐಜಾಜ್​ ಶೇಖ್​ ಮಾತನಾಡಿ, ಜಪಾನಿ ಪ್ರಜೆಗಳು ಇಬ್ಬರು ಸೆಕ್ಯೂರಿಟಿ ಗಾರ್ಡ್​​ಗಳೊಂದಿಗೆ ವ್ಯಾನ್​ನಲ್ಲಿ ಪ್ರಯಾಣಿಸುವಾಗ ಉಗ್ರಗಾಮಿಗಳು ವ್ಯಾನ್​ ಮೇಲೆ ದಾಳಿ ನಡೆಸಿದ್ದಾರೆ. ಸೆಕ್ಯೂರಿಟಿ ಗಾರ್ಡ್​​ ಒಬ್ಬ ಉಗ್ರಗಾಮಿಯನ್ನು ಕೊಂದಿದ್ದು, ಮತ್ತೊಬ್ಬ ಉಗ್ರನಿಗಾಗಿ ವ್ಯಾನ್​ನ ಸಮೀಪ ಬರುವಾಗ ತನ್ನನ್ನು ತಾನೇ ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದಿದ್ದಾರೆ.

ಘಟನೆಯ ದಾಳಿಯ ಹೊಣೆಯನ್ನು ಇದುವರೆಗೆ ಯಾರು ಹೊತ್ತಿಲ್ಲ. ಜಪಾನಿಗರು ಪ್ರಯಾಣಿಸುತ್ತಿದ್ದ ವ್ಯಾನ್​ ಬುಲೆಟ್​ ಪ್ರೂಫ್​ ಹೊಂದಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಘಟನೆ ಕುರಿತು ಸಿಂದ್​ ಸಾರಿಗೆ ಸಚಿವ ಶರ್ಜೀಲ್​ ಇನಾಂ ಮೆಮೊನ್​ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಉದ್ದೇಶವೇನು, ಈ ಘಟನೆ ಹಿಂದಿರುವ ಮಾಸ್ಟರ್​ಮೈಡ್​ ಯಾರು ಎಂಬುದನ್ನು ಕಾನೂನು ಕಾರಿ ಅಧಿಕಾರಿಗಳು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!