ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಸಾಧುಗಳನ್ನು ಜನರು ಮಕ್ಕಳ ಕಳ್ಳರೆಂದು ತಿಳಿದು ಹಲ್ಲೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಕಳ್ಳರೆಂದು ಭಾವಿಸಿ ಬಂಗಾಳದ ಪುರುಲಿಯಾದಲ್ಲಿ ಗ್ರಾಮಸ್ಥರ ಗುಂಪೊಂದು ಹಲ್ಲೆ ಮಾಡಿದೆ.
ಸಾಧುಗಳು , ಅವರ ಪುತ್ರಿಬ್ಬರು ಗಂಗಾಸಾಗರ ತಲುಪಲು ಗಾಡಿ ಬುಕ್ ಮಾಡಿದ್ದರು. ಅಡ್ರೆಸ್ ಕೇಳಿದಾಗ ಅವರ ಬಗ್ಗೆ ಸ್ಥಳೀಯರಿಗೆ ಅನುಮಾನ ಉಂಟಾಗಿದೆ. ಮೂವರು ಹೆಣ್ಣುಮಕ್ಕಳ ಗುಂಪಿನ ಬಳಿ ಸಾಧುಗಳು ವಿಳಾಸ ಕೇಳಿದ್ದಾರೆ. ಆ ಬಾಲೆಯರು ಕಿರುಚಿ ಓಡಿಹೋಗಿದ್ದಾರೆ.
ಈ ಘಟನೆಯನ್ನು ಸ್ಥಳೀಯರು, ಲೈಂಗಿಕರ ಕಿರುಕುಳ ಹಾಗೂ ಮಕ್ಕಳ ಕಳ್ಳರು ಎಂದು ಭಾವಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಧುಗಳನ್ನು ರಕ್ಷಿಸಿದ್ದಾರೆ.