ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಟಲ್ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಕ್ಯಾಬ್ ಚಾಲಕ ಮತ್ತು ಪೊಲೀಸರು ರಕ್ಷಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆಯ ಪ್ರಾಣ ಉಳಿದಿದೆ. ಆ ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್ ಎಂದು ಗುರುತಿಸಲಾಗದ್ದು, ಮುಂಬೈ ಈಶಾನ್ಯ ಭಾಗದಲ್ಲಿರುವ ಮುಲುಂಡ್ ನಿವಾಸಿಯಾಗಿದ್ದಾರೆ.ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಿಳೆಯು ದೇವರ ಫೋಟೊವನ್ನು ಸಮದ್ರದಲ್ಲಿ ಮುಳುಗಿಸುವುದಾಗಿ ಹೇಳಿ ಸೇತುವೆ ಮೇಲೆ ಕ್ಯಾಬ್ ನಿಲ್ಲಿಸಲು ಚಾಲಕ ಸಂಜಯ್ ಯಾದವ್ಗೆ ಹೇಳಿದ್ದಾರೆ. ಬಳಿಕ ಮಹಿಳೆ ಕಾರನಿಂದ ಇಳಿದು ರೇಲಿಂಗ್ ದಾಟಿದ್ದಾರೆ.
ಮಹಿಳೆ ಅಟಲ್ ಸೇತುವೆಯ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿದ್ದು, ಬಳಿಕ ಅಲ್ಲಿಂದ ಜಿಗಿದಿದ್ದಾರೆ. ಅಲ್ಲೇ ಇದ್ದ ಕಾರಿನ ಚಾಲಕ ಮಹಿಳೆ ಜಿಗಿದಾಗ ಆಕೆಯ ಕೂದಲನ್ನು ಹಿಡಿದು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಕೂದಲು ಹಿಡಿದು ಪಾರು ಮಾಡಲು ಪ್ರಯತ್ನಿಸುತ್ತಿದ್ದ ಕಾರು ಚಾಲಕನ ಜತೆಗೆ ಸ್ಥಳಕ್ಕೆ ಬಂದ ಗಸ್ತು ತಿರುಗುತ್ತಿದ್ದ ಪೊಲೀಸರು ಮಹಿಳೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾಬ್ ಚಾಲಕ ಸಂಜಯ್ ಯಾದವ್ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಳಿಕ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಮಹಿಳೆ ಮಾನಸಿಕವಾಗಿ ನೊಂದಿದ್ದಾರೆ ಎಂದು ನಹವಾ ಶೇವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಂಜುಮ್ ಬಾಗವಾನ್ ಹೇಳಿದ್ದಾರೆ.
ಅಟಲ್ ಸೇತುವಿನ ಮೇಲೆ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜುಲೈನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಇಂಜಿನಿಯರ್ ಅಟಲ್ ಸೇತುವಿನಿಂದ ಜಿಗಿದಿದ್ದರು.