ಹೊಸದಿಗಂತ ವರದಿ, ತುಮಕೂರು :
ತುಮಕೂರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟದ,ಮಾರಾಟ ಮಾಡುವ ಪೆಡ್ಲರ್‌ಗಳ ಪತ್ತೆಗೆ ಜಿಲ್ಲೆಯಲ್ಲಿ ಪೊಲೀಸರು ತೀವ್ರ ನಿಗಾವಹಿಸಿದ್ದು 13,60,000 ರೂ ಮೌಲ್ಯದ 17 ಕೆಜಿ 89 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ.ಸಿ.ಹೆಚ್. ಹಾಗೂ ಪಿ.ಎಸ್.ಐ ಶಮೀನ್ ಅವರ ತಂಡವು ಶುಕ್ರವಾರ ತುಮಕೂರು ನಗರ ಪೊಲೀಸ್ ಠಾಣೆ ಸರಹದ್ದು ಗಾರ್ಡನ್ ರಸ್ತೆ, ಟೂಡಾ ಲೇಔಟ್‌ನಲ್ಲಿ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದ ರಾಕೇಶ್ ಬಿನ್ ಜಯನಂದ ಕುಮಾರ್, 35 ವರ್ಷ, ವಾಸ 4ನೇ ಕ್ರಾಸ್, ನಾಯ್ಡು ನಗರ, ಮೈಸೂರು ಮತ್ತು ಹರ್ಷ. ಪಿ.ಜೆ. ಬಿನ್ ಜಯರಾಮು, 20 ವರ್ಷ, ವಾಸ ಪಾಲಹಳ್ಳಿ, ಬೆಳಗೊಳ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೋಕ್, ಮಂಡ್ಯ ಜಿಲ್ಲೆ ಇವರುಗಳನ್ನು ಬಂಧಿಸಿ ವಶದಲ್ಲಿ ಇದ್ದ 13,60,000 ರೂ ಮೌಲ್ಯದ 17 ಕೆಜಿ 89 ಗ್ರಾಂ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲು ಶ್ರಮಿಸಿದ ತುಮಕೂರು ಸಿ.ಇ.ಎನ್ ಠಾಣೆಯ ಅಧಿಕಾರಿಗಳ ಕಾರ್ಯ ವೈಖರಿಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಪ್ರಶಂಸಿಸಿದ್ದಾರೆ.