ಹೊಸದಿಗಂತ ವರದಿ, ರಾಮನಗರ :
ಕೇವಲ 48 ಜನ ಮಾತ್ರ ಹನಿಟ್ರ್ಯಾಪ್ ಗೆ ಒಳಗಾಗಿಲ್ಲ, ರಾಜ್ಯದ 224 ಶಾಸಕರು ಇದ್ದಿರಬಹುದು ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ರಾಮನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಎಬ್ಬಿಸಿರುವ ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಡಾ.ರಂಗನಾಥ್ ಹಾಗೂ ಡಾ.ಬಾಲಕೃಷ್ಣ ಬಿಟ್ಟು ಉಳಿದವರೆಲ್ಲಾ ಈ ಹನಿಟ್ರ್ಯಾಪ್ ಗಾಳಕ್ಕೆ ಬಿದ್ದಿದ್ದಾರೆ.
ಡಿ.ಕೆ.ಸುರೇಶ್ ಅವರನ್ನು ಸೋಲಿಸಿದವರನ್ನು ಚಿತ್ ಮಾಡ್ತಾ ಇದ್ದೀನಿ ಎಂದಿದ್ದಾರೆ. ಈಗ ಮಾಡುತ್ತಿದ್ದಾರಷ್ಟೇ. ಯೋಗೇಶ್ವರ್ನ ಚಿತ್ ಮಾಡಿದ್ದಾರೆ. ಟಿಕೆಟ್ ಕೊಟ್ಟು ಗೆಲ್ಲಿಸಿ ಈಗ ಏನ್ ಮಾಡಿದ್ದಾರೆ ಗೊತ್ತಿಲ್ವಾ? ಮುನಿರತ್ನಗೂ ಚಿತ್ ಮಾಡಿದ್ದಾರೆ. ಹಾಗೇ ಎಲ್ಲಾ ಪಕ್ಷದವರು ಈ ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಅವರಿಗೆ ಯಾರ್ ಯಾರು ಬೇಕು, ಬೇಡ್ವೋ..ಅವರಿಗೆ ಅನುಕೂಲಕ್ಕೆ ಅನುಗುಣವಾಗಿ ಹಳ್ಳಿಯಿಂದ ದಿಲ್ಲಿವರೆಗೂ ಹೀಗೆ ಮಾಡುತ್ತಾ ಬಂದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ನನ್ ತಮ್ಮ ಡಿಕೆ ಸುರೇಶ್ ಅವರನ್ನು ಸೋಲಿಸಿದವರ ಲೆಕ್ಕಚುಕ್ತಾ ಮಾಡ್ತಿದ್ದೀನಿ ಅಂತಾ ಡಿಕೆಶಿ ಅವರೇ ಹೇಳಿದ್ರಲ್ವಾ? ಈಗ ಮಾಡ್ತಿದ್ದಾರೆ ಎಂದು ಮಂಜುನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.