Friday, February 23, 2024

ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ: ಗೋದಾಮಿನ ಮೇಲೆ ಪೊಲೀಸರ ದಾಳಿ

ಹೊಸದಿಗಂತ ವರದಿ, ಶಿವಮೊಗ್ಗ :

ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅನಧಿಕೃತವಾಗಿ ಸಂಗ್ರಹಣೆ ಮಾಡಿ ಸಾಗಾಣಿಕೆ ಮಾಡಲು ಲೋಡ್ ಮಾಡುತ್ತಿದ್ದ ಗಾಡಿಕೊಪ್ಪದಲ್ಲಿನ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ 3,70,000 ರೂ. ವೌಲ್ಯದ 338 ಚೀಲ ಅಕ್ಕಿ ವಶಪಡಿಸಿಕೊಂಡು 6 ಜನರನ್ನು ಸೋಮವಾರ ಬಂಧಿಸಿದ್ದಾರೆ.
ನಗರದ ಕಸ್ತೂರಿ ಬಾ ರಸ್ತೆಯ ಕಾರ್ತಿಕೇಯನ್ ಯಾನೆ ಕಾರ್ತಿಕ(53), ಕಾಚಿನಕಟ್ಟೆಯ ಗೋಪಿ (23), ಸೀತಾರಾಮ (40)ಮತ್ತಿಘಟ್ಟದ ಕಾಂತರಾಜ (32)ನ್ಯೂಮಂಡ್ಲಿಯ ಯುವರಾಜ (28), ಭದ್ರಾವತಿ ದೇವರ ನರಸೀಪುರದ ಶ್ರೀನಿ (20)ಬಂತ ಆರೋಪಿಗಳಾಗಿದ್ದಾರೆ.
2 ಕ್ಯಾಂಟರ್, ತೂಕದ 2 ಎಲೆಕ್ಟ್ರಾನಿಕ್ ಯಂತ್ರ ಮತ್ತು ಚೀಲದ ಹೊಲಿಗೆ ಯಂತ್ರ ಅಮಾನತುಪಡಿಸಿಕೊಳ್ಳಲಾಗಿದೆ, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!