Friday, December 9, 2022

Latest Posts

ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಡೆಲಿವರಿ ನೀಡದೆ ವಂಚನೆ: ಸೇಲ್ಸ್‌ ಮ್ಯಾನ್‌ ಪರಾರಿ

ಹೊಸದಿಗಂತ ವರದಿ,ವಿಜಯಪುರ:

ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಡೆಲಿವರಿ ಕೊಡಲು ತೆರಳಿದ ಬಂಗಾರ ಅಂಗಡಿಯ ಕೆಲಸಗಾರರು ಮಾಲೀಕನಿಗೆ ವಂಚಿಸಿರುವ ಘಟನೆ ನಗರದ ರಾಮ ಮಂದಿರ ಹತ್ತಿರದ ಕಾವ್ಯಾ ಜುವೇಲರ್ಸ್‌‌ನಲ್ಲಿ ನಡೆದಿದೆ.

ಬಂಗಾರದ ಅಂಗಡಿ ವ್ಯಾಪಾರ ಪರೇಶ ಗಜರಾಜ ಜೈನ್‌‌ಗೆ ಕೆಲಸಗಾರರು ನಂಬಿಕೆ ದ್ರೋಹ ಎಸಗಿದ್ದಾರೆ.
ಮುಂಬೈ ಮೂಲದ ಜಗದೀಶ ಗೇಮಾವತ ಹಾಗೂ ಉತ್ತರ ಪ್ರದೇಶ ಮೂಲಕ ಧರ್ಮೇಂದ್ರ ಗೌರ ಮೋಸಗೈದಿರುವ ಆರೋಪಿಗಳು.

ಈ ಆರೋಪಿಗಳು ಸೇಲ್ಸ್‌ ಮ್ಯಾನ್‌ ಧರ್ಮೇಂದ್ರಗೆ 2,10,71,266 ಮೌಲ್ಯದ 4969.4 ಗ್ರಾಂ ಬಂಗಾರದ ಆಭರಣಗಳನ್ನು ಕೊಡದೇ ಪರಾರಿಯಾಗಿದ್ದಾರೆ.

ಇನ್ನೂ ರಿಟೇಲ್‌ ಅಂಗಡಿಗಳಿಗೆ ಡೆಲಿವರಿ ಕೊಡದೇ ನಂಬಿಕೆ ದ್ರೋಹ ಮಾಡಿ, ವಂಚಿಸಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!