ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನ ಗ್ರಾಮವೊಂದರಲ್ಲಿ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ
ಕಾಮುಕನನ್ನು ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಕುಮಾರ್ ತಾನು ಜಾಧವ್ ಎಂಬಾತನೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿ. ಬಾಲಕಿ ಕೈಗೆ ಚಾಕಲೇಟ್ ಕೊಟ್ಟು, ತೊಗರಿ ಹೊಲಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ.
ಈ ವೇಳೆ ಬಾಲಕಿ ಕಿರುಚಾಡುವುದನ್ನ ಕಂಡು ಅಕ್ಕಪಕ್ಕ ಹೊಲದ ಜನರು ಆಗಮಿಸಿ, ರೆಡ್ ಹ್ಯಾಂಡ್ ಆಗಿ ಕುಮಾರ ಜಾಧವ್ ನನ್ನು ಹಿಡಿದ್ದಾರೆ. ಕಾಮುಕನನ್ನು ಸಾರ್ವಜನಿಕರು ಥಳಿಸಿ, ವಾಡಿ ಪೊಲೀಸ್ ರಿಗೆ ಒಪ್ಪಿಸಿದ್ದಾರೆ.
ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ