Thursday, March 30, 2023

Latest Posts

ಗಾಂಜಾ ಅನಧಿಕೃತ ಮಾರಾಟ ಯತ್ನ: ಇಬ್ಬರ ಬಂಧನ

ಹೊಸದಿಗಂತ ವರದಿ,ಕುಮಟಾ :

ತಾಲೂಕಿನ ಮೂರೂರು ಗುಡ್ಡದ ವಿಶ್ವಕರ್ಮ ಹಾಲ್ ಹತ್ತಿರ ಅನಧಿಕೃತವಾಗಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದಾಗ ದಾಳಿ ಮಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರಸಾದ ನಾಗಪ್ಪ ಮಡಿವಾಳ, ಸುನಿಲ್ ಸತ್ಯನಾರಾಯಣ ಮುಕ್ರಿ ಇಬ್ಬರು ಬಂಧನಕ್ಕೆ ಒಳಗಾದ ವ್ಯಕ್ತಿಗಳಾಗಿದ್ದಾರೆ. ಸುಮಾರು 10,000 ಬೆಲೆಯ 230 ಗ್ರಾಂ ಗಾಂಜಾ ಮತ್ತು ರೂ. 660 ನಗದು ಹೋಡಾ ಕಂಪನಿಯ ಮೋಟರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕುಮಟಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಪ್ರಕರಣಗಳು ಆಗಾಗ ವರದಿಯಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!