ಮುಂಬೈ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ವೇಳೆ ಅಗ್ನಿ ಅವಘಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈ ಫಿಲ್ಮ್ ಸಿಟಿಯ ಟಿವಿ ಧಾರಾವಾಹಿ ‘ಗಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ ಸೆಟ್‌ ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ .

ಈ ಕುರಿತು ಮಾಹಿತಿ ನೀಡಿದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿ, ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೊದ 2,000 ಚದರ ಅಡಿ ವಿಸ್ತೀರ್ಣದ ನೆಲ ಮಹಡಿಯಲ್ಲಿ ಸಂಜೆ 4.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಟುಡಿಯೊದಿಂದ ದಟ್ಟವಾದ ಕಪ್ಪು ಹೊಗೆ ಹೊರಸೂಸುತ್ತಿದ್ದು, ಕನಿಷ್ಠ 12 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!