ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಜಂಬೂ ಸವಾರಿಯು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿದೆ. ಒಟ್ಟು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 7ನೇ ಬಾರಿಗೆ ಅಭಿಮನ್ಯು ಹೊತ್ತಿದ್ದಾನೆ.ಈ ಒಂದು ಜಂಬೂ ಸವಾರಿಯು ಅರಮನೆಯಿಂದ ಹೊರಟು, ಜಯಚಾಮರಾಜ ವೃತ್ತ, ಕೆ ಆರ್ ವೃತ್ತ, ಸಯಾಜಿ ರಾವ್ ರಸ್ತೆ, ಆಯುರ್ವೇದ ಆಸ್ಪತ್ರೆಯ ವೃತ್ತ, ತಿಲಕ ನಗರ, ಆರ್‌ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ರೋಡ್ ಬನ್ನಿಮಂಟಪ ಮೈದಾನ, ಬನ್ನಿಮಂಟಪ ತಲುಪಲಿದೆ.