ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ: ಅಕ್ಟೋಬರ್‌ 1ರಿಂದ ಆಗಲಿದೆ ಈ ನಿಯಮಗಳಲ್ಲಿ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್‌ನಲ್ಲೇ ಹೊಸ ಕ್ರೆಡಿಟ್‌ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಇದರ ಭಾಗವಾಗಿ ಅಕ್ಟೋಬರ್ 1 ರಿಂದ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ನೀವು ಬದಲಾವಣೆಗಳನ್ನು ಗಮನಿಸಬಹುದು.
ಇದು ಜನಸಾಮಾನ್ಯರ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಒಳ್ಳೆಯದು.

ಕ್ರೆಡಿಟ್ ಕಾರ್ಡ್ ಮಿತಿಗೆ ಅನುಮತಿ

ಕ್ರೆಡಿಟ್ ಕಾರ್ಡ್ ವಿತರಕರು ತಮ್ಮ ಸ್ವಂತ ವಿವೇಚನೆಯಿಂದ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇದನ್ನು ಕಾರ್ಡ್ ಹೊಂದಿರುವವರು ಅನುಮೋದಿಸಬೇಕು ಮತ್ತು ಒಮ್ಮೆ ಮಾಡಿದ ನಂತರ ತಿಳಿಸಬೇಕು.ಈ ಹಿಂದೆ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಸಂದೇಶಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಮಿತಿಯನ್ನು ಹೆಚ್ಚಿಸುವ ಮೊದಲು ಯಾವುದೇ ಅನುಮತಿ ಕೇಳುತ್ತಿರಲಿಲ್ಲ. ಅಕ್ಟೋಬರ್ 1ರ ನಂತರ ಕಾರ್ಡ್‌ದಾರರ ಲಿಖಿತ ಒಪ್ಪಿಗೆಯಿಲ್ಲದೆ ಕ್ರೆಡಿಟ್ ಲೈನ್ ಮಿತಿಯನ್ನು ಹೆಚ್ಚಿಸುವುಂತಿಲ್ಲ.

ಕಾರ್ಡ್ ಟೋಕನೈಸೇಷನ್

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಪಾವತಿಗೆ ಅಕ್ಟೋಬರ್ 1ರಿಂದ ಟೋಕನೈಸೇಷನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಧಿಸೂಚನೆಯಲ್ಲಿ ತಿಳಿಸಿದೆ. ಆನ್ ಲೈನ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಹಾಗೂ ಸುಭದ್ರವಾಗಿಡಲು ಆರ್ ಬಿಐ ಟೋಕನೈಸೇಷನ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇನ್ನು ಮುಂದೆ ಈ ಮಾಹಿತಿಗಳು ಟೋಕನ್ ರೂಪದಲ್ಲಿ ಇರಲಿವೆ.

ಕಾರ್ಡ್ ವಿತರಕರಿಗೆ OTP ಪಡೆಯಲು ಅನುಮತಿ

ಕ್ರೆಡಿಟ್‌ ಕಾರ್ಡ್‌ ನೀಡಿ 30 ದಿನಗಳಾದ್ರೂ ಗ್ರಾಹಕರು ಅದನ್ನು ಆಕ್ಟಿವೇಟ್‌ ಮಾಡದೇ ಇದ್ದಲ್ಲಿ ಕ್ರೆಡಿಟ್ ಕಾರ್ಡ್ ವಿತರಕರು ಮೊದಲು OTP ಆಧಾರಿತ ಒಪ್ಪಿಗೆಯನ್ನು ಪಡೆಯಬೇಕು. ಕಾರ್ಡ್ ಅನ್ನು ಸಕ್ರಿಯಗೊಳಿಸಲು ಗ್ರಾಹಕರು ನಿರಾಕರಿಸಿದರೆ ಕ್ರೆಡಿಟ್ ಕಾರ್ಡ್ ವಿತರಕರು, ಏಳು ದಿನಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದೆ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!