ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಾರಿಗೆ ನಿಗಮಗಳು ಬಸ್ ದರ ಏರಿಕೆ ಮಾಡುವ ಪ್ರಸ್ತಾಪಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕ ಬೆನ್ನಲ್ಲಿಯೇ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ತಮ್ಮ ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ.
ಸರ್ಕಾರದ ಆದೇಶದಂತೆ 15% ಟಿಕೆಟ್ ದರ ಏರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೊಸ ಬಸ್ ದರಗಳಲ್ಲಿ ರೌಂಡ್ ಆಫ್ ಕಡಿಮೆ ಇರುವ ಕಾರಣ, ಬಸ್ ಹತ್ತೋ ಮುನ್ನ ಕೈಯಲ್ಲಿ ಚಿಲ್ಲರೆ ಹಿಡಿದುಕೊಂಡೇ ಏರಿದರೆ, ಕಂಡಕ್ಟರ್ ಜೊತೆ ಗಲಾಟೆ ಮಾಡಿಕೊಳ್ಳೋದು ತಪ್ಪಲಿದೆ.
ಈ ಮೊದಲು ಒಂದು ಸ್ಟೇಜ್ ಗೆ 5 ರೂಪಾಯಿಯನ್ನು ಬಿಎಂಟಿಸಿ ಚಾರ್ಜ್ ಮಾಡುತ್ತಿತ್ತು. ಇದನ್ನೀಗ 6 ರೂಪಾಯಿಗೆ ಏರಿಕೆ ಮಾಡಲಾಗಿದೆ. 2 ಸ್ಟೇಜ್ ಟಿಕೆಟ್ ದರವನ್ನ 10 ರೂಪಾಯಿಯಿಂದ 12 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಸದ್ಯ ಮೆಜೆಸ್ಟಿಕ್ನಿಂದ ಜಯನಗರಕ್ಕೆ 20 ರೂಪಾಯಿ ಇದೆ. ದರ ಏರಿಕೆ ಬಳಿಕ 23 ರೂಪಾಯಿ ಆಗಿದೆ. ಮೆಜೆಸ್ಟಿಕ್ನಿಂದ ಸರ್ಜಾಪುರಕ್ಕೂ 25 ರೂಪಾಯಿ ಇದ್ದು, ದರ ಏರಿಕೆ ಬಳಿಕ 28 ರೂ. ಆಗಿದೆ. ಮೆಜೆಸ್ಟಿಕ್ ಟು ಅತ್ತಿಬೆಲೆಗೆ ಸದ್ಯದ ಪ್ರಯಾಣ ದರ 25 ರೂಪಾಯಿ ಇದ್ದು, ಈಗ 28 ರೂಪಾಯಿ ಆಗಿದೆ.
ಏರ್ ಪೋರ್ಟ್ ಬಿಎಂಟಿಸಿ ಬಸ್ ಟಿಕೆಟ್ ರೇಟ್ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಏರ್ ಪೋರ್ಟ್ ಗೆ ವಾಯುವಜ್ರ ಎಸಿ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಹೀಗಾಗಿ 15% ದರ ಏರಿಕೆಗೆ ಜಿಎಸ್‌ಟಿ ಕೂಡ ಹಾಕಲಾಗಿದೆ. ಟೋಲ್ ದರ ಸೇರಿ ಟಿಕೆಟ್ ರೇಟ್ ಹೆಚ್ಚಳ. ಏರ್ ಪೋರ್ಟ್ ನಿಂದ ಮೆಜೆಸ್ಟಿಕ್ ಗೆ 250 ರೂಪಾಯಿ ಇದ್ದ ದರ 290 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಬಿಎಂಟಿಸಿ ಹಳೆಯ ಮತ್ತು ಪರಿಷ್ಕೃತ ದರ ಪಟ್ಟಿ
1-ಮೆಜೆಸ್ಟಿಕ್ ಟು ಜೆ.ಪಿ ನಗರ ಹಿಂದಿನ ದರ- 20 ರುಪಾಯಿ ಪರಿಷ್ಕೃತ ದರ- 24 ರುಪಾಯಿ
2-ಮೆಜೆಸ್ಟಿಕ್ ಟು ನಂದಿನಿ ಲೇಔಟ್ ಸದ್ಯ- 25 ಹೊಸ ದರ- 28 ರುಪಾಯಿ
3-ಮೆಜೆಸ್ಟಿಕ್ ಟು ಯಶವಂತಪುರ ರೈಲ್ವೆ ಸ್ಟೇಷನ್ ಸದ್ಯ- 20 ಹೊಸ ದರ- 23
4-ಮೆಜೆಸ್ಟಿಕ್ ಟು ಪೀಣ್ಯ ಎರಡನೇ ಹಂತ ಸದ್ಯದ ದರ- 25 ಹೊಸ ದರ- 28
5-ಮೆಜೆಸ್ಟಿಕ್ ಟು ಅತ್ತಿಬೆಲೆ ಸದ್ಯ- 25 ಹೊಸ ದರ- 30
6-ಮೆಜೆಸ್ಟಿಕ್ ಟು ವಿದ್ಯಾರಣ್ಯಪುರ ಸದ್ಯದ ದರ- 25 ಹೊಸ ದರ- 28
7-ಮೆಜೆಸ್ಟಿಕ್ ಟು ದೊಡ್ಡಬಳ್ಳಾಪುರ ಸದ್ಯದ ದರ- 25 ಹೊಸ ದರ- 30
8-ಮೆಜೆಸ್ಟಿಕ್ ಟು ಬಿಇಎಂಎಲ್ 5 ನೇ ಹಂತ- ಸದ್ಯ- 20 ಹೊಸ ದರ- 24
9-ಮೆಜೆಸ್ಟಿಕ್ ಟು ಕುಮಾರಸ್ವಾಮಿ ಲೇಔಟ್ ಸಸ್ಯದ ದರ- 25 ಹೊಸ ದರ- 28
10- ಮೆಜೆಸ್ಟಿಕ್ ಟು ಬಿಟಿಎಂ ಲೇಔಟ್ ಸದ್ಯ- 25 ಹೊಸ- 28