ಉತ್ತರಾಖಂಡ್​ದಿಂದ ಕಾಶ್ಮೀರದವರೆಗೆ… ಎರಡು ನದಿ ದಾಟಿ ಪ್ರಯಾಣ ಮಾಡಿದ ಹುಲಿರಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗಡಿ ಎಂಬುದು ಮಾನವನನ್ನು ಮಾತ್ರ ಕಟ್ಟಿ ಹಾಕುವ ರೇಖೆ. ಆದರೆ, ಪ್ರಾಣಿಗಳಿಗೆ ಇದರ ಕಟ್ಟುಪಾಡು ಇಲ್ಲ ಅದರ ಸದುಪಯೋಗಪಡಿಸಿಕೊಂಡ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹುಲಿಯೊಂದು ನಾಲ್ಕು ರಾಜ್ಯದಲ್ಲಿ ಸಂಚಾರ ಮಾಡಿದೆ.

ಈ ರೀತಿ ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ್ದು, ಆದಾಗ್ಯೂ ಈ ಹುಲಿರಾಯನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಉತ್ತರಾಖಂಡ್​ನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಿಂದ ಹೊರಟಿರುವ ಈ ಹುಲಿ ನೂರಾರು ಕಿ.ಮೀ ಸಾಗಿದ್ದು, ಇದರ ಪತ್ತೆಗೆ ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಮ್ಮ ಆವಾಸಸ್ಥಾನದ ಹೊರತಾಗಿ ಎಲ್ಲೆಡೆ ಈ ಹುಲಿ ಮುಕ್ತವಾಗಿ ಸಂಚಾರ ಮಾಡುತ್ತಿರುವುದು ಕೂಡ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಅನೇಕ ರಾಜ್ಯಗಳಲ್ಲಿ ಈ ಹುಲಿರಾಯನನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ.

ರಾಜ್ಯದ ಗಡಿದಾಟಿ ಪ್ರಯಾಣಿಸಿರುವ ಈ ಹುಲಿಯು ಇದೀಗ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಈ ಹುಲಿ ಉತ್ತರಾಖಂಡ್​ದಿಂದ ಕಾಶ್ಮೀರದವರೆಗೆ ಪ್ರಯಾಣ ಬೆಳೆಸಿದೆ ಎಂಬುದೇ ಎಲ್ಲರನ್ನೂ ಅಚ್ಚರಿಗೆ ಮಾಡುವಂತೆ ಮಾಡಿದೆ.

ಗಂಗಾ ಮತ್ತು ಯಮನಾ ನದಿ ದಾಟಿದ ಹುಲಿ
ಕಳೆದ 24 ವರ್ಷದಲ್ಲಿ ಗಂಗಾ ಮತ್ತು ಯಮುನಾ ನದಿ ದಾಟಿ ಸಂಚಾರ ಮಾಡಿದ ಹುಲಿ ಇದಾಗಿದೆ. ಈ ಹುಲಿಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಗೌಹರಿ ಶ್ರೇಣಿಯಿಂದ ಗಂಗಾ ನದಿಯನ್ನು ದಾಟಿ ರಾಜಾಜಿಯ ಮೋತಿಚೂರ್ ಶ್ರೇಣಿಯನ್ನು ಪ್ರವೇಶಿಸಿದೆ. ಹಿಮಾಚಲದಲ್ಲಿದ್ದಾಗ, ಅದು ಪೊಂಟಾದಿಂದ ಯಮುನಾ ನದಿಯನ್ನು ದಾಟಿ ಹರಿಯಾಣಕ್ಕೆ ಪ್ರಯಾಣಿಸಿದೆ.

ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ. ಅದರಲ್ಲಿ ಗಂಗಾ ನದಿ ದಾಳಿ ರಾಜಾಜಿ ಪಶ್ಚಿಮ ಭಾಗ ತಲುಪಿದ ಮೊದಲ ಹುಲಿ ಇದಾಗಿದೆ. ಈ ಹುಲಿ 2022ರಲ್ಲೂ ಕೂಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ದಿಢೀರ್​ ಕಣ್ಮರೆಯಾಗಿತ್ತು. ಇದಾದ ಬಳಿಕ ಫೆಬ್ರವರಿಯಲ್ಲಿ 2023ರಲ್ಲಿ ಹಿಮಾಚಲದ ಸಿಬಲ್ವರ ವನ್ಯಜೀವಿ ಧಾಮದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಮೇ 2023ರಲ್ಲಿ ಹರಿಯಾಣದ ಕಲೆಸರ್​ ವನ್ಯಜೀವಿ ಧಾಮದಲ್ಲಿ ದಾಖಲಾಗಿತ್ತು. ಆದಾದ ಮೂರು ತಿಂಗಳ ಬಳಿಕ ಆಗಸ್ಟ್​ನಲ್ಲಿ ಇದು ಹಿಮಾಚಲದ ಅರಣ್ಯದಲ್ಲಿ ಮತ್ತೆ ಕಾಣಿಸಿಕೊಂಡಿತ್ತು.

ಇದೀಗ ಈ ಹುಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪತ್ತೆಯಾಗಿರುವ ಸುದ್ದಿ ಬಂದಿದೆ. ಇದು ಹಿಮಾಚಲ ಮತ್ತು ಹರಿಯಾಣ ದಾಟಿ ಜಮ್ಮು ಮತ್ತು ಕಾಶ್ಮೀರ ತಲುಪಿರುವ ಸಾಧ್ಯತೆ ಇದೆ. ಅಲ್ಲಿದೆ 700 ರಿಂದ 800 ಕಿ.ಮೀ ದೂರ ಈ ಹುಲಿ ಗಡಿಗಳ ಎಲ್ಲೆ ಮೀರಿ ಪ್ರಯಾಣ ಮಾಡಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇದು ರಜೌರಿಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆ ಇದೇ ಅದರ ಆವಾಸಸ್ಥಾನವೇ ಎಂಬ ಪ್ರಶ್ನೆಯೂ ಮೂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಸದ್ಯ, ಉತ್ತರಾಖಂಡ ಅರಣ್ಯ ಇಲಾಖೆ ಈ ಎಲ್ಲದರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!