ಡಿಜಿಟಲ್‌ ಕಥಾವೇದಿಕೆ ಪ್ರತಿಲಿಪಿಯೊಂದಿಗೆ ಒಪ್ಪಂದ ಮಾಡಿಕೊಂಡ ಆಡಿಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆಜಾನ್‌ ಒಡೆತನದ ಆಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ʼಆಡಿಬಲ್‌ʼ ಡಿಜಿಟಲ್‌ ಕಥಾವೇದಿಕೆ ʼಪ್ರತಿಲಿಪಿʼಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಪ್ರತಿಲಿಪಿಯಲ್ಲಿನ ಉತ್ತಮ ಕಂಟೆಂಟ್‌ ಗಳನ್ನು ಆಡಿಬಲ್‌ ಆಡಿಯೋ ಬುಕ್‌ ಗಳು, ಆಡಿಯೋ ಶೋಗಳ ರೂಪದಲ್ಲಿ ಹೊರತರಲಿದೆ. ಎರಡೂ ಕಂಪನಿಗಳು 18 ತಿಂಗಳ ಒಪ್ಪಂದಕ್ಕೆ ಒಪ್ಪಿಕೊಂಡಿದ್ದು ಪ್ರತಿಲಿಪಿ ಭಾರತದಲ್ಲಿ ಆಡಿಬಲ್‌ಗಾಗಿ 300 ಗಂಟೆಗಳ ಕಂಟೆಂಟ್‌ ಅನ್ನು ಅಭಿವೃದ್ಧಿಪಡಿಸಲಿದೆ. ರೊಮ್ಯಾನ್ಸ್, ಹಾರರ್, ಥ್ರಿಲ್ಲರ್ ಮತ್ತು ಮಿಸ್ಟರಿ ಪ್ರಕಾರಗಳ ವಿಷಯಗಳನ್ನು ಪ್ರತಿಲಿಪಿ ನೀಡಲಿದೆ. ಇದರ ಭಾಗವಾಗಿ ಪ್ರತಿಲಿಪಿಯ ಹಿಟ್‌ ಕಥೆಗಳಾದ ಸಿಯಾಹ್, ಬೆನ್ಪನಾ ಇಷ್ಕ್, ಕೊಥೆವಾಲಿಯಂತಹ ಕಥೆಗಳು ಆಡಿಯೋ ಶೋಗಳ ರೂಪದಲ್ಲಿ ಹೊರಬರಲಿವೆ.

“ಭಾಷೆ, ಭೌಗೋಳಿಕತೆ ಮತ್ತು ಸ್ವರೂಪದಂತಹ ಅಡೆತಡೆಗಳನ್ನು ಲೆಕ್ಕಿಸದೆ ಉತ್ತಮ ಕಥೆಗಳನ್ನು ಪ್ರತಿಲಿಪಿ ನೀಡಿದೆ. ಆಡಿಬಲ್‌ನೊಂದಿಗಿನ ಈ ಒಪ್ಪಂದದ ಮೂಲಕ, ಪ್ರತಿಲಿಪಿಯನ್ನು ಕೆಲವು ಅತ್ಯುತ್ತಮ ಕಥೆಗಳಿಗೆ ನೆಲಯನ್ನಾಗಿ ರೂಪಿಸಲಿದ್ದೇವೆ” ಎಂದು ಪ್ರತಿಲಿಪಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಜೀತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

Amazon ಒಡೆತನದ ಆನ್‌ಲೈನ್ ಆಡಿಯೊಬುಕ್ ಸೇವೆಯಾದ ಆಡಿಬಲ್ 2021 ರಲ್ಲಿ ಭಾರತದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿತು. ಸನ್ಯಾ ಮಲ್ಹೋತ್ರಾ, ಕುಬ್ರ ಸೇಟ್, ಸಯಾನಿ ಗುಪ್ತಾ ಮುಂತಾದ ಸೆಲೆಬ್ರಿಟಿಗಳ ಪಾಡ್‌ ಕಾಸ್ಟ್‌ ಗಳೂ ಸೇರಿದಂತೆ ಸಾವಿರಾರು ಆಡಿಯೋ ಸರಣಿಗಳು ಆಡಿಬಲ್‌ ನಲ್ಲಿ ಲಭ್ಯವಿದೆ. ಇದೀಗ ಪ್ರತಿಲಿಪಿಯ ವಿಷಯಗಳು ಆಡಿಬಲ್‌ ನಲ್ಲಿ ಆಡಿಯೋ ಸರಣಿಗಳಾಗಿ ಹೊರಹೊಮ್ಮಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!