ರಾಜ್ಯಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂದು ಮತ್ತು ನಾಳೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಲಿದ್ದಾರೆ. ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ನಡ್ಡಾ ಇಂದು ಮಾಧ್ಯಾಹ್ನ 1:30ಕ್ಕೆ ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್​ನಲ್ಲಿರುವ ಜಿಂದಾಲ್ ಏರ್​ಪೋರ್ಟ್​​ಗೆ ಆಗಮಿಸಲಿದ್ದಾರೆ.

ತದನಂತರ ಹೆಲಿಕಾಪ್ಟರ್​ ಮೂಲಕ ಮಧ್ಯಾಹ್ನ 2:15ಕ್ಕೆ ಚಿತ್ರದುರ್ಗದ ಮುರುಘಾಮಠ ಬಳಿಯ ಹೆಲಿಪ್ಯಾಡ್​​ಗೆ ಜೆ.ಪಿ ನಡ್ಡಾ ಬರಲಿದ್ದಾರೆ. ಬಳಿಕ ರಸ್ತೆ ಮೂಲಕ ಚಳ್ಳಕೆರೆ ಪಟ್ಟಣಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಚಳ್ಳಕೆರೆ ಪಟ್ಟಣದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಯಾತ್ರೆ ಅಂಗವಾಗಿ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಯಲಿದೆ. ನಂತರ ರಸ್ತೆ ಮೂಲಕ ಚಳ್ಳಕೆರೆಯಿಂದ ಮೊಳಕಾಲ್ಮೂರಿಗೆ ತೆರಳುವ ಅವರು ಮಧ್ಯಾಹ್ನ 4:30ಕ್ಕೆ ಮೊಳಕಾಲ್ಮೂರಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಮೊಳಕಾಲ್ಮೂಲ್ಲಿ ಸಂಜೆ 5.20ಕ್ಕೆ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿ ಸಮಾವೇಶ ನಡೆಯಲಿದ್ದು, ಸಮಾವೇಶದ ಬಳಿಕ ಬಳ್ಳಾರಿಗೆ ತೆರಳಲಿದ್ದಾರೆ. ರಾತ್ರಿ ಬಳ್ಳಾರಿಯ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೆ.ಇ ನಡ್ಡಾಗೆ ಆಂದ್ರಪ್ರದೇಶ ಬಿಜೆಪಿ ರಾಜ್ಯದ್ಯಕ್ಷ ಸೋಮು ವೀರರಾಜು, ಸಾರಿಗೆ ಸಚಿವ ಬಿ.ಶ್ರೀರಾಮುಲು ಜೊತೆಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!