ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಆಸೀಸ್ ಆಟಗಾರ ಡೇವಿಡ್‌ ವಾರ್ನರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಚಾಂಪಿಯನ್ ಆಗಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳಲ್ಲಿ (Team India Fans) ಆಸೀಸ್‌ ಆಟಗಾರ ಡೇವಿಡ್‌ ವಾರ್ನರ್‌ (David Warner) ಕ್ಷಮೆ ಕೋರಿದ್ದಾರೆ.

ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ (Team India) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆದ್ರೆ ತಮ್ಮ ಎಕ್ಸ್‌ ಖಾತೆಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆ ಕೋರಿರುವ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ (Australia) 6ನೇ ಟ್ರೋಫಿ ಗೆಲ್ಲುವ ಮೂಲಕ ಕೋಟ್ಯಾನು ಕೋಟಿ ಭಾರತೀಯ ಅಭಿಮಾನಿಗಳ ಹೃದಯ ಒಡೆದಿದ್ದೇವೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಕ್ಷಮೆಯಾಚಿಸುತ್ತೇನೆ. ನಿಜಕ್ಕೂ ಇದೊಂದು ಅತ್ಯದ್ಬುತ ಪಂದ್ಯವಾಗಿತ್ತು ಮತ್ತು ನಂಬಲಾಗದ ವಾತಾವರಣ ಸೃಷ್ಟಿಯಾಗಿತ್ತು. ಭಾರತ ನಿಜಕ್ಕೂ ಗಂಭೀರವಾದ ವಿಶ್ವಕಪ್ ಟೂರ್ನಿಯನ್ನೇ ನಡೆಸಿಕೊಟ್ಟಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!