Friday, June 9, 2023

Latest Posts

ಭಾರತದ ಈ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಪ್ರವೇಶ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ಟ್ರೇಲಿಯಾದ ವಿಕ್ಟೊರಿಯಾ, ಎಡಿತ್ ಕೊವನ್ ಸೇರಿದಂತೆ ಪ್ರತಿಷ್ಠಿತ ಆಸ್ಟ್ರೇಲಿಯಾ ವಿಶ್ವ ವಿದ್ಯಾಲಯಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ.

ಈ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲು ನಿರ್ಧರಿಸಿದೆ. ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿ ವೀಸಾ ಅಕ್ರಮ.

ಪಂಜಾಬ್, ರಾಜಸ್ಥಾನ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡದಲ್ಲಿ ವಿದ್ಯಾರ್ಥಿ ವೀಸಾ ಅಕ್ರಮ ಹೆಚ್ಚಾಗಿದೆ. ಇದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ತಲೆನೋವು ಹೆಚ್ಚಿಸಿದೆ. ಹೀಗಾಗಿ ಭಾರತದ 6 ರಾಜ್ಯಗಳ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದೆ.

ಆಸ್ಟ್ರೇಲಿಯಾದ ಟೊರೆನ್ಸ್ ವಿಶ್ವವಿದ್ಯಾಲಯ, ಸೌದರ್ನ್ ಕ್ರಾಸ್ ಯುನಿವರ್ಸಿಟಿ, ಎಡಿತ್ ಕೋವನ್, ವಿಕ್ಟೋರಿಯಾ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ನಿರ್ಧಾರ ಪ್ರಕಟಿಸಿತ್ತು. ಇದೀಗ ನ್ಯೂ ಸೌಥ್ ವೇಲ್ಸ್, ಫೆಡರೇಶನ್, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ. ಈ 6 ರಾಜ್ಯಗಳ ವಿದ್ಯಾರ್ಥಿಗಳ ಅರ್ಜಿಯನ್ನು ಅಲ್ಲಿಂಗ ವಿದೇಶಾಂಗ ಇಲಾಖೆ ತಿರಸ್ಕರಿದೆ.

ಅಕ್ರಮ ವಿದ್ಯಾರ್ಥಿ ವೀಸಾ ಕಾರಣದಿಂದ ಭಾರತದ ವಿದ್ಯಾರ್ಥಿಗಳ ಅರ್ಜಿಯನ್ನು ವಿದೇಶಾಂಗ ಇಲಾಖೆ ತರಿಸ್ಕರಿಸುತ್ತಿದೆ. ಇದು ತೀವ್ರ ತಲೆನೋವಿಗೆ ಕಾರಣವಾಗಿದೆ. ಅಕ್ರಮ ವಿದ್ಯಾರ್ಥಿ ವೀಸಾ, ಅಕ್ರಮ ದಾಖಲೆಗಳನ್ನು ಸಲ್ಲಿಕೆ ಮಾಡುತ್ತಿರುವ ಕಾರಣಗಳಿಂದ ವೀಸಾ ರಿಜೆಕ್ಟ್ ಆಗುತ್ತಿದೆ. ಇದಕ್ಕಾಗಿ ಆಯಾ ರಾಜ್ಯಗಳು ಈ ಕುರಿತು ಎಚ್ಚರಿಕೆ ವಹಿಸುವಂತೆ ಭಾರತದ ವಿದೇಶಾಂಕ ಇಲಾಖೆ ಸೂಚನೆ ನೀಡಿದೆ.

ಆಸ್ಟ್ರೇಲಿಯಾದ ಒಂದೊಂದೆ ವಿಶ್ವವಿದ್ಯಾಲಗಳು ನಿಷೇಧ ನಿರ್ಧಾರ ಘೋಷಿಸುತ್ತಿದ್ದಂತೆ ಇತ್ತ ಆಯಾ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದೆ. ಅಕ್ರಮ ವೀಸಾ ಪ್ರಕರಣಕ್ಕೆ ಅಂತ್ಯಹಾಡಲು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಜುಗರ ಅನುಭವಿಸುವಂತಾಗಿದೆ. ಹೀಗಾಗಿ ಅಕ್ರಮ ದಾಖಲಾತಿ, ವೀಸಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜ್ಯಗಳು ನಿರ್ಧರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!