Tuesday, May 30, 2023

Latest Posts

ಮಠ-ಮಂದಿರ ಬಸವತತ್ವ ಸಾರುವ ಕೆಲಸ ಮಾಡಲಿ: ಹೊರಟ್ಟಿ

ಹೊಸದಿಗಂತ ವರದಿ,ಹುಬ್ಬಳ್ಳಿ:

ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ವಿಶ್ವಕ್ಕೆ ಪರಿಚಯಿಸಿದ ಬಸವಣ್ಣವರನ್ನು ಈಗ ಒಂದೇ ಸಮಾಜಕ್ಕೆ ಸೀಮಿತ ಮಾಡಿದ್ದಾರೆ. ಅದು ಸರಿಯಾದ ವಿಚಾರವಲ್ಲ. ಮಠ-ಮಂದಿರಗಳ ಮುಖಾಂತರ ಜಗತ್ತಿಗೆ ಬಸತತ್ವ ಸಾರುವ ಕೆಲಸ ಆಗಬೇಕಿದೆ. ಅದನ್ನು ನಾವು ಮಾಡಲು ಮುಂದಾದರೇ ರಾಜಕೀಯ ಎನ್ನುತ್ತಾರೆ ಎಂದು ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶುಕ್ರವಾರ ಇಲ್ಲಿಯ ಮೂರುಸಾವಿರಮಠದ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ ೨೦ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಯಾವ ಮಠಗಳು ಬಸವತತ್ವ ಸಂದೇಶ ಸಾರುವ ಕಾರ್ಯ ಮಾಡುತ್ತಿಲ್ಲ. ಜಾತಿ ಗೊಬ್ಬರಿರುವ ಸ್ವಾಮೀಜಿಗಳು ಸದ್ಯ ಜಾಣ ನಡೆ ಅನುಸರಿಸುತ್ತಿದ್ದಾರೆ. ಈ ವಿಚಾರ ಮಠಾಶರು ತಪ್ಪು ತಿಳಿದರೂ ನನಗೇನೂ ಬೇಜಾರಿಲ್ಲ ಎಂದರು.

ಪ್ರಸ್ತುತ ದಿನಗಳಲ್ಲಿ ಜಾತಿಯೇ ಎಲ್ಲಕ್ಕಿಂತ ಮುಖ್ಯವಾಗಿದ್ದು, ಈಗ ಪ್ರತಿಯೊಂದರಲ್ಲೂ ಜಾತಿ ನೋಡಿ ಮಣೆ ಹಾಕಲಾಗುತ್ತದೆ. ಅವರವರ ಜಾತಿಯ ವ್ಯಕ್ತಿಗಳನ್ನು ಬೆಳೆಸುವ ಪರಿಪಾಠ ಆರಂಭವಾಗಿದೆ. ರಾಜಕೀಯದಲ್ಲೂ ಜಾತಿ ನೋಡಿ ಟಿಕೆಟ್ ನೀಡಲಾಗುತ್ತಿದೆ. ಬಸವಣ್ಣ ಇವೆಲ್ಲವನ್ನೂ ವಿರೋಸಿ, ವಚನಗಳ ಮೂಲಕ ಸಮಾಜದ ಸುಧಾರಣೆಗೆ ಮುಂದಾಗಿದ್ದರು ಎಂದು ತಿಳಿಸಿದರು.

ಸಮಾಜದಲ್ಲಿ ಕೆಲವರು ಜೀವಂತವಿದ್ದರು ಇಲ್ಲದ ಹಾಗೇ ನಿಧನ ಹೊಂದಿದವರು ನಮ್ಮ ಹತ್ತಿರ ಇರತ್ತಾರೆ. ಮೂಜಗಂ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರು ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ರೀತಿ ಇನ್ನೂ ಕಣ್ಮುಂದೆಯೇ ಇದೆ. ಮೂರು ಸಾವಿರ ಮಠದ ರಾಷ್ಟ್ರಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!