ಭಾರತದಲ್ಲಿ ಮೊದಲನೇ Omicron ಸಬ್‌ವೇರಿಯಂಟ್ BQ.1 ಪ್ರಕರಣ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ವರದಿಯಾಗುತ್ತಿರುವ ಬೆನ್ನಲ್ಲೇ ಭಾರತದ ಮೊದಲ Omicron ಸಬ್‌ವೇರಿಯಂಟ್ BQ.1 ಪ್ರಕರಣವು ಪುಣೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಪುಣೆ ನಿವಾಸಿಗಳ ಮಾದರಿಯ ಜಿನೋಮ್ ಸೀಕ್ವೆನ್ಸಿಂಗ್ ಸಮಯದಲ್ಲಿ Omicron ಸಬ್‌ವೇರಿಯಂಟ್ BQ.1 ರ ಭಾರತದ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ ಎನ್ನಲಾಗಿದೆ. ಈ ಕುರಿತು ರಾಜ್ಯ ಸರ್ವೇಲೆನ್ಸ್‌ ಅಧಿಕಾರಿ ಪ್ರದೀಪ್ ಅವಟೆ ಅವರು ಉಲ್ಲೇಖಿಸಿದ್ದು ಹೆಚ್ಚಿನ ಅಪಾಯದ ರೋಗಿಗಳು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

BQ.1 ಮತ್ತು BQ.1.1 ಓಮಿಕ್ರಾನ್‌ನ BA.5 ಸಬ್‌ವೇರಿಯಂಟ್‌ನ ಎರಡು ವಿಧಗಳಾಗಿದ್ದು, ಇವೆರಡನ್ನೂ ಅಪಾಯಕಾರಿ ಎಂದು ವಿವರಿಸಲಾಗಿದೆ ಏಕೆಂದರೆ ಅವುಗಳು ಕೋವಿಡ್-19 ವಿರುದ್ಧ ಲಭ್ಯವಿರುವ ಲಸಿಕೆಗಳಿಂದ ತಪ್ಪಿಸಿಕೊಳ್ಳಬಹುದು ಎನ್ನಲಾಗಿದೆ. US ನಲ್ಲಿ ಎಲ್ಲಾ ಸಕ್ರಿಯ ಪ್ರಕರಣಗಳಲ್ಲಿ ಶೇ. 10ಕ್ಕಿಂತ ಹೆಚ್ಚಿನವುಗಳಿಗೆ ಇದೇ ವೇರಿಯೆಂಟ್‌ ಗಳು ಕಾರಣ ಎನ್ನಲಾಗಿದೆ.

ಅಕ್ಟೋಬರ್ 16 ರಂದು ಕೊನೆಗೊಂಡ ವಾರದಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು 17.7% ರಷ್ಟು ಹೆಚ್ಚಾಗಿದೆ. ಸೋಮವಾರ, ರಾಜ್ಯವು 201 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ 1.82 ಶೇಕಡಾದಷ್ಟಿದೆ. ಪುಣೆಯಲ್ಲಿ 23 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಸ್ತುತ ಹಬ್ಬ ಹರಿದಿನಗಳ ಸಮಯ ಬರುತ್ತಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರ್ಕಾರ ತಿಳಿಸಿದೆ. ಜ್ವರದಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಆದಷ್ಟು ಬೇಗ ವೈದ್ಯಕೀಯ ಸಲಹೆ ಪಡೆಯಿರಿ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂದು ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕರಲ್ಲಿ ವಿನಂತಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!