ಆಸ್ಟ್ರೇಲಿಯಾ ಓಪನ್ 2022: ರಾಫೆಲ್ ನಡಾಲ್ ಗೆ ಐತಿಹಾಸಿಕ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಫೈನಲ್‌ನ ಕಾದಾಟದಲ್ಲಿ 35 ವರ್ಷ ವಯಸ್ಸಿನ ರಫೆಲ್ ನಡಾಲ್ ಅವರು ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 5 ಸೆಟ್‌ಗಳ ಮ್ಯಾರಥಾನ್‌ ಹೋರಾಟ ನಡೆಸಿ, ರಷ್ಯಾದ ಯುವ ತಾರೆ ಡ್ಯಾನಿಲ್‌ ಮೆಡ್ವೆಡೆವ್‌ 2-6, 6-7 (5/7), 6-4, 6-4, 7-5 ಅಂತರದ ಸೆಟ್‌ಗಳಿಂದ ಮಣಿಸಿ ಆಸೀಸ್‌ ನೆಲದಲ್ಲಿ ಮೊದಲ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಈ ಮೂಲಕ ವಿಶ್ವದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ರಾಫೆಲ್ ನಡಾಲ್ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!