ಶ್ರೀಲಂಕಾಕ್ಕೆ ಆಸರೆಯಾದ ಆಸ್ಟ್ರೇಲಿಯಾ: ಸರಣಿಯ ಬಹುಮಾನದ ಹಣವನ್ನು ದಾನ ನೀಡಿದ ಕ್ರಿಕೆಟ್‌ ಟೀಮ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅರಾಜಕತೆಯಿಂದ ಬಳಲುತ್ತಿರುವ ಶ್ರೀಲಂಕಾಕ್ಕೆ ಈಗಾಗಲೇ ಭಾರತ ಸಹಿತ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿದ್ದು, ಇದೀಗ ಆಸ್ಟ್ರೇಲಿಯಾ ಪುರುಷ ಕ್ರಿಕೆಟಿಗರು ಸಹಾಯಗೆ ಮುಂದೆ ಬಂದಿದ್ದಾರೆ.

ಆಸ್ಟ್ರೇಲಿಯಾವು ಕ್ರಿಕೆಟ್​ ಸರಣಿಯಲ್ಲಿ ತಾವು ಗೆದ್ದ ಪ್ರಶಸ್ತಿಯ ಹಣವನ್ನು ದಾನವಾಗಿ ನೀಡಲು ಮುಂದಾಗಿದ್ದಾರೆ. ಕಳೆದ ಜೂನ್​-ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಆಸೀಸ್ ತಂಡ ಗೆಲುವು ದಾಖಲಿಸಿತ್ತು.

ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ಆಸೀಸ್ ತಂಡ ಟೆಸ್ಟ್​, ಟಿ20 ಪಂದ್ಯಗಳ ಸರಣಿ ಆಡಿತ್ತು. ಈ ಸರಣಿಯಲ್ಲಿ ತಾವು ಗೆದ್ದಿರುವ ಒಟ್ಟು $45,000 ಹಣವನ್ನೀಗ UNICEFಗೆ ನೀಡಿದೆ. ಟೆಸ್ಟ್​​ ನಾಯಕ ಪ್ಯಾಟ್​ ಕಮ್ಮಿನ್ಸ್​ ಹಾಗೂ ಸೀಮಿತ ಓವರ್​​​​ಗಳ ನಾಯಕ ಆ್ಯರನ್​ ಫಿಂಚ್​ ಈ ನಿರ್ಧಾರ ಕೈಗೊಂಡಿದ್ದಾರೆ. ಲಂಕಾದ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರೆ ಸೇವೆಗಳಿಗೆ ಇದು ಬಳಕೆಯಾಗಲಿದೆ.

ಆಸ್ಟ್ರೇಲಿಯಾದ UNICEF ರಾಯಭಾರಿ, ಕ್ರಿಕೆಟಿಗ ಕಮ್ಮಿನ್ಸ್ ಮಾತನಾಡಿ, ಶ್ರೀಲಂಕಾ ಯಾವ ರೀತಿಯ ತೊಂದರೆ ಅನುಭವಿಸುತ್ತಿದೆ ಎಂಬುದು ನಮಗೆ ಗೊತ್ತಿದೆ. ತಂಡದ ಪರಿಸ್ಥಿತಿ ನೋಡಿದಾಗಲೂ ಈ ಬಗ್ಗೆ ನಮಗೆ ಅರಿವಾಗಿದೆ. ಇದೀಗ ಅಲ್ಲಿನ ಮಕ್ಕಳು ಹಾಗೂ ಕೆಲ ಕುಟುಂಬಗಳನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!