ಇಂಗ್ಲೆಂಡ್ ವಿರುದ್ಧದ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ: 4-0ಯಲ್ಲಿ ಆ್ಯಶಸ್​ ಸರಣಿ ಗೆದ್ದುಬೀಗಿದ ಕಾಂಗರೂ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನು 2 ದಿನಗಳು ಬಾಕಿ ಉಳಿದಿರುವಂತೆ 146 ರನ್​ಗಳ ಜಯ ಸಾಧಿಸಿದ್ದು,ಈ ಮೂಲಕ ​4-0ಯಲ್ಲಿ ಆ್ಯಶಸ್​ ಸರಣಿ ಗೆದ್ದುಕೊಂಡಿದೆ.
3ನೇ ದಿನವಾದ ಇಂದು ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್​ನಲ್ಲಿ 155ಕ್ಕೆ ಆಲೌಟ್​ ಆದರೂ, ಆಂಗ್ಲರಿಗೆ 271 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಆಂಗ್ಲ ಪಡೆ ಕೇವಲ 124 ರನ್​ಗಳಿ ಸರ್ವಪತನ ಕಂಡು ಸೋಲುಂಡಿತು.
ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 303 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಇಂಗ್ಲೆಂಡ್​ ಕೇವಲ 188ಕ್ಕೆ ಆಲೌಟ್ ಆಗಿ 115 ರನ್​ಗಳ ಹಿನ್ನಡೆ ಅನುಭವಿಸಿತ್ತು.
ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯ ಮೊದಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 4ನೇ ಪಂದ್ಯವನ್ನು ಕೊನೆಯ ಓವರ್​ತನಕ ಆಡಿ ಇಂಗ್ಲೆಂಡ್ ಸೋಲಿನಿಂದ ತಪ್ಪಿಸಿಕೊಂಡಿತ್ತು.
ಸರಣಿಯನ್ನು ಸೋಲುವ ಮೂಲಕ ಇಂಗ್ಲೆಂಡ್ ಸತತ 3ನೇ ಬಾರಿ ಆ್ಯಶಸ್​ ಸರಣಿಯನ್ನು ಕಳೆದುಕೊಂಡಂತಾಗಿದೆ. ಇಂಗ್ಲೆಂಡ್ ಕೊನೆಯ ಬಾರಿ 2015ರಲ್ಲಿ ತವರಿನಲ್ಲಿ ನಡೆದಿದ್ದ ಸರಣಿಯಲ್ಲಿ 3-2ರಲ್ಲಿ ಗೆಲುವು ಸಾಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!