ಪ್ರತಿಯೊಬ್ಬರಿಗೂ 80ಲಕ್ಷ ರೂ. ಬೋನಸ್ ಘೋಷಿಸಿದ ಲೇಡಿ ಬಾಸ್: ಆನಂದದಲ್ಲಿ ಉದ್ಯೋಗಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆಜಾನ್, ಟ್ವಿಟರ್, ಮೆಟಾ, ಮೈಕ್ರೋಸಾಫ್ಟ್, ಲೆನೊವೊ, ಅಡೋಬ್, ಸೇಲ್ಸ್‌ಫೋರ್ಸ್, ಪೆಪ್ಸಿಕೊ ಮತ್ತು ಸಿಸ್ಕೋದಂತಹ ದೊಡ್ಡ ಕಂಪನಿಗಳು ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ, ಲೇಡಿ ಬಾಸ್ ತನ್ನ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಘೋಷಿಸಿದ್ದಾರೆ. ಪ್ರತಿ ಉದ್ಯೋಗಿಗೆ 1 ಲಕ್ಷ ಡಾಲರ್ ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 82 ಲಕ್ಷ ರೂಪಾಯಿ. ವಿಚಾರ ತಿಳಿದ ನೌಕರರು ಕನಸೋ ನಿಜವೋ ಗೊತ್ತಿಲ್ಲದೆ ಕೆಲ ಕಾಲ ದಿಗ್ಬ್ರಾಂತರಾಗಿದ್ದಂತೂ ಸುಳ್ಳಲ್ಲ.

ಬೋನಸ್‌ ಪಡೆದ ಉದ್ಯೋಗಿಗಳ ಹೆಸರು ಘೋಷಣೆ ಮಾಡುತ್ತಿದ್ದಂತೆ ಎಲ್ಲರೂ ಒಮ್ಮೆಲೆ ಆಶ್ಚರ್ಯಕ್ಕೆ ಒಳಗಾದರು. ಲೇಡಿ ಬಾಸ್ ತಲಾ ನೂರು ಸಾವಿರ ಡಾಲರ್ ಬೋನಸ್ ಘೋಷಿಸಿ ಉದ್ಯೋಗಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಂಪನಿಗಳಲ್ಲಿ ರಾಯ್ ಹಿಲ್ ಒಂದಾಗಿದೆ. ಕಂಪನಿಯನ್ನು ರೈನ್ ಹಾರ್ಟ್ ಎಂಬ ಮಹಿಳೆ ನಡೆಸುತ್ತಿದ್ದಾರೆ. ರೆನ್‌ಹಾರ್ಟ್ ಅವರು ಆಸ್ಟ್ರೇಲಿಯಾದ ಗಣಿಗಾರಿಕೆ ಮತ್ತು ಕೃಷಿ ಕಂಪನಿ (ಗಿನಾ) ಹ್ಯಾನ್‌ಕಾಕ್ ಪ್ರಾಸ್ಪೆಕ್ಟಿಂಗ್‌ನ ಕಾರ್ಯನಿರ್ವಾಹಕ ಅಧ್ಯಕ್ಷ-ಕಮ್-ನಿರ್ದೇಶಕರಾಗಿದ್ದಾರೆ ರೈನ್ ಹಾರ್ಟ್. ಗಣಿಗಾರಿಕೆಯ ದೊರೆ ಎಂದು ಕರೆಯಲ್ಪಡುವ ಅವರು $ 34 ಬಿಲಿಯನ್ ಸಂಪತ್ತನ್ನು ಹೊಂದಿರುವ ಆಸ್ಟ್ರೇಲಿಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಹ್ಯಾನ್‌ಕಾಕ್ ಪ್ರಾಸ್ಪೆಕ್ಟಿಂಗ್‌ನ ರಾಯ್‌ಹಿಲ್, ಆಕೆಯ ತಂದೆ ಸ್ಥಾಪಿಸಿದ ಕಂಪನಿಯ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಸಂಸ್ಥೆಯ 10 ಮಂದಿ ನೌಕರರ ಹೆಸರನ್ನು ಓದಿದ್ದಾರೆ. ತಮ್ಮನ್ನು ಕೆಲಸದಿಂದ ವಜಾ ಮಾಡಲು ಹೆಸರು ಕರೆದಿದ್ದಾರೆ ಎಂದುಕೊಂಡಿದ್ದ ಸಿಬ್ಬಂದಿಗೆ ಕ್ರಿಸ್ ಮಸ್ ಬೋನಸ್ ಆಗಿ ಆ 10 ಉದ್ಯೋಗಿಗಳಿಗೆ ತಲಾ ಒಂದು ಲಕ್ಷ ಅಮೆರಿಕನ್ ಡಾಲರ್ (ಸುಮಾರು 82 ಲಕ್ಷ ರೂ.) ಬೋನಸ್ ನೀಡುತ್ತಿರುವುದಾಗಿ ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ.

ಬೋನಸ್ ಪಡೆಯಲಿರುವ ಹತ್ತು ಜನರಲ್ಲಿ ಮೂರು ತಿಂಗಳ ಹಿಂದೆ ಕಂಪನಿಗೆ ಸೇರಿದ ಉದ್ಯೋಗಿಯೂ ಇದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಕಂಪನಿಯು ಒಂದು ವರ್ಷದಲ್ಲಿ $3.3 ಶತಕೋಟಿ ಲಾಭವನ್ನು ಗಳಿಸಿತು. ಈ ಸವಲತ್ತುಗಳಲ್ಲಿ ಉದ್ಯೋಗಿಗಳ ಸಂಕಷ್ಟಗಳೂ ಸೇರಿವೆ. ಇದೇ ಉದ್ದೇಶದಿಂದ ಕಂಪನಿಯು ಭಾರಿ ಬೋನಸ್‌ಗಳನ್ನು ಘೋಷಿಸಿರುವುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!